ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲಿನಿಂದ ಎಕ್ಕಾರ್ ತನಕ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮ

ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸಂಸ್ಥೆಯ ಹಳೆವಿದ್ಯಾರ್ಥಿ ಹಾಗೂ 19 ಗಿನ್ನೆಸ್ ದಾಖಲೆ ಹೊಂದಿರುವ ಶ್ರೀ ರಕ್ಷಿತ್ ಶೆಟ್ಟಿ ಹಾಗೂ ಕಟೀಲು ಪದವಿ ಕಾಲೇಜಿನ ಸಹಯೋಗದೊಂದಿಗೆ 5 ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯನ್ನು ಕಟೀಲು ಪದವಿ ಕಾಲೇಜಿನಿಂದ ಎಕ್ಕಾರು ವರೆಗೆ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮ ನಡೆಯಿತು.

ಸ್ಪರ್ಧೆಯಲ್ಲಿ ಕಟೀಲು ಸಮೂಹ ಸಂಸ್ಥೆಗಳು ಹಾಗೂ ನೆರೆಹೊರೆ ಸಂಸ್ಥೆಗಳ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ.ಕೃಷ್ಣ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ ರೈ, ಕಟೀಲು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ಪುಂಡಲೀಕ ಕೊಠಾರಿ, ಸಂತೋಷ್, ಕಟೀಲು ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಕೃಷ್ಣ ಹಾಗೂ ಎಕ್ಕಾರು ಗ್ರಾಮ ಪಂಚಾಯತ್ ಸದಸ್ಯರೂ ಹಾಗೂ ಸಂಸ್ಥೆಯ ಹಳೆವಿದ್ಯಾರ್ಥಿ ಸುದೀಪ್ ಅಮೀನ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿಭಾಗದಲ್ಲಿ ಪಾಂಪೈ ಕಾಲೇಜು, ಐಕಳ ಇಲ್ಲಿನ ವಿದ್ಯಾರ್ಥಿಗಳಾದ ಸಂಜಯ್ ಪ್ರಥಮ, ಅನೀಶ್ ದ್ವಿತೀಯ, ಅಲೆನ್ ತೃತೀಯ, ಹಾಗೂ ಎಸ್.ಡಿ.ಪಿ.ಟಿ. ಪದವಿ ಕಾಲೇಜಿನ ಆಕಾಶ್ ಚತುರ್ಥ ಬಹುಮಾನವನ್ನು ಪಡೆದಿರುತ್ತಾರೆ.

ಹೈಸ್ಕೂಲ್ ವಿಭಾಗದಲ್ಲಿ ಎಸ್.ಡಿ.ಪಿ.ಟಿ.ಪ್ರೌಢಶಾಲೆ, ಕಟೀಲು ಇಲ್ಲಿನ ವಿದ್ಯಾರ್ಥಿಗಳಾದ ತ್ರಿಶಾನ್ ಪ್ರಥಮ, ಶ್ರಾವಣ್ ದ್ವಿತೀಯ, ಸರಕಾರಿ ಪ್ರೌಢಶಾಲೆ ಎಕ್ಕಾರು ಇಲ್ಲಿನ ವಿದ್ಯಾರ್ಥಿಗಳಾದ ಬಸವರಾಜ್ ತೃತೀಯ, ರಾಧೇಶ್ಯಾಂ ಚತುರ್ಥ ಬಹುಮಾನವನ್ನು ಪಡೆದಿರುತ್ತಾರೆ.

Edited By : PublicNext Desk
Kshetra Samachara

Kshetra Samachara

18/03/2022 04:45 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ