ಬಜಪೆ: ರಾಜಕೀಯವಾಗಿ, ಸಾಮಾಜಿಕವಾಗಿ ಯುವಕರಿಗೆ ನಾಯಕತ್ವ ನೀಡಿ ಸಮಾಜವನ್ನು ಸಮರ್ಥವಾಗಿ ಮುನ್ನಡೆಸಲು ಅವಕಾಶ ನೀಡಬೇಕು ಹಿಂದುತ್ವವೆಂದರೆ ಮನುಷ್ಯತ್ವ ಹಿಂದುತ್ವ ಎಂದ ತಕ್ಷಣ ಮುಸ್ಲಿಂ, ಕ್ರೈಸ್ತರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಆದರೆ ಹಿಂದುತ್ವ ಎಂದರೆ ಮನುಷ್ಯತ್ವವೇ ಹೊರತು ವೈರತ್ವ ಅಲ್ಲ,ಯಾವುದೇ ಜಾತಿ ಧರ್ಮ ಭೇಧ ವಿಲ್ಲದ ಜಾತ್ಯಾತೀತತೆಯೇ ಹಿಂದುತ್ವ, ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು. ಅವರು ಕುಪ್ಪೆಪದವು ಸಮೀಪದ ಕುಲವೂರು ಗ್ರಾಮದ ತೆರೆಜಾಲು ದೊಂಪದಬಲಿ ಉತ್ಸವದ ಸಂಧರ್ಭದಲ್ಲಿ ನಡೆದ ದೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ) ಕುಲವೂರು ಇದರ ದಶ ಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅನಾರೋಗ್ಯದಿಂದ ಬಳಳುತ್ತಿರುವ ರಜಾಕ್ ಕುಲವೂರು, ಹಂಗು ಬೊಳಿಯ, ರಮೇಶ್ ಬೊಳಿಯ ಮತ್ತು ದಿವಂಗತ ರಾಮ ಪೂಜಾರಿ ಅವರುಗಳ ಕುಟುಂಬಗಳಿಗೆ ಕ್ಲಬ್ ವತಿಯಿಂದ ನೀಡಲಾದ ಧನಸಹಾಯವನ್ನು ಶಾಸಕರು ವಿತರಿಸಿದರು ಹಾಗೂ ಇಲ್ಲಿನ ದೈವಗಳ ಚಾಕರಿ ನಿರ್ವಹಿಸಿದ್ದ ಹಿರಿಯರುಗಳಾದ ಸತೀಶ್ ಪಂಬದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗೇಶ್ ಶೇರಿಗಾರ್, ಧರ್ನಪ್ಪ ನಾಯ್ಕ್, ವಾಮನ ಭಂಡಾರಿ, ಶೀನ ಪೂಜಾರಿ ಹಾಗೂ ದೊಂಪದಬಲಿ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಕುಲವೂರು ಗುತ್ತು ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಅಸ್ರಣ್ಣ ಕುಪ್ಪೆಪದವು ಅವರು ವಹಿಸಿದ್ದರು.ಈ ಸಂದರ್ಭ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಮತ್ತು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ , ನಾಗೇಶ್ ಶೇರಿಗಾರ್ ಧಾರ್ಮಿಕ, ಸಾಮಾಜಿಕ ಮುಖಂಡ ಚಂದ್ರಹಾಸ್ ಶೆಟ್ಟಿ ನಾರಳ, ಯೂತ್ ಕ್ಲಬ್ ಅಧ್ಯಕ್ಷ ಸಂತೋಷ್ ಆಳ್ವ ಕಂಗಿನಡಿ ,ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಿಜೇತ್ ಬೆಟ್ಟ0ಪಾಡಿ ನಿರೂಪಿಸಿ, ಸ್ವಾಗತಿಸಿದರು. ನಂತರ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಮಂಗಳೂರು ಇವರಿಂದ ಲೇಲೆ ಪಾಡಡೆ ಎಂಬ ತುಳು ನಾಟಕ ಪ್ರದರ್ಶನ ಜರಗಿತು.
Kshetra Samachara
10/03/2022 06:13 pm