ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ! ಮೂವರು ಆರೋಪಿಗಳು ಪರಾರಿ!!

ಬೈಂದೂರು : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರು ಗ್ರಾಮದ ಜಯರಾಮ್ ಹೆಬ್ಬಾರ್ ಎಂಬವರು ಆಲೂರು ಸೊಸೈಟಿ ಹಿಂದುಗಡೆ ಬಾಡಿಗೆ ರೂಮ್ ಹತ್ತಿರ ಕುಳಿತಿರುವ ವೇಳೆ ಪ್ರಸಾದ್ ಆಚಾರಿ ಆಲೂರು, ಸುಭಾಷ್ ಶೆಟ್ಟಿ ಆಲೂರು ಹಾಗೂ ನಿಖಿತ್ ಪೂಜಾರಿ ಎಂಬುವರು ವ್ಯಕ್ತಿಯ ಎದೆ , ತಲೆ, ಕೈಯ ಮೇಲೆ ಬಿಯರ್ ಬಾಟಲಿಯಿಂದ ಗಂಭೀರ ರೀತಿಯ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ, ಎಂದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಪೊಲೀಸರು ಓಡಿ ಹೋಗಿರುವ ಮೂವರು ಆರೋಪಿಗಳನ್ನು ಪತ್ತೆಯ ಕಾರ್ಯಚರಣೆ ಮುಂದುವರಿದಿದೆ,

ಆರೋಪಿಗಳ ಮೇಲೆ ಈ ಹಿಂದೆಯೂ ಸಹ ಇಂತಹ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Edited By : PublicNext Desk
Kshetra Samachara

Kshetra Samachara

06/12/2024 09:27 pm

Cinque Terre

2.2 K

Cinque Terre

0

ಸಂಬಂಧಿತ ಸುದ್ದಿ