ಬಜಪೆ :ಕಟೀಲುಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಂಘದ ವತಿಯಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರಿಗೆ ಶಾಲಾ, ಕಾಲೇಜು, ಕಛೇರಿಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕಾನೂನಿನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಆಳ್ವಾಸ್ ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿಭಾಗದ ಡಾ. ಮೂಕಾಂಬಿಕಾ ಜಿ.ಎಸ್. ಮನೆ, ಶಾಲಾ-ಕಾಲೇಜು, ಕಚೇರಿಗಳಲ್ಲಿ ನಡೆಯುವ ವಿವಿಧ ಲೈಂಗಿಕ ದೌರ್ಜನ್ಯ ಹಾಗೂ ಶಾಲಾ ಕಾಲೇಜುಗಳ ಆಂತರಿಕ ಶಿಸ್ತುಪಾಲನಾ ಸಮಿತಿ, ತಾಲ್ಲೂಕು ಮತ್ತು ರಾಜ್ಯ, ರಾಷ್ಟ್ರ ಮಟ್ಟದಲ್ಲಿರುವ ಕಾನೂನಿನ ನೆರವಿನ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಕಟೀಲು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಮತ್ತು ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ಎಮ್.ಎಸ್.ಡಬ್ಲ್ಯೂ ವಿಭಾಗದೊಂದಿಗೆ ತಿಳುವಳಿಕೆಯ ಒಡಂಬಡಿಕೆಯ ಪತ್ರದ ವಿನಿಮಯ ಮಾಡಿಕೊಳ್ಳಲಾಯಿತು. ಕುಮಾರಿ ಲಾವಣ್ಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಂಘದ ಸಂಚಾಲಕಿ ಡಾ.ಸುನೀತಾ ಎಚ್.ಬಿ. ಸ್ವಾಗತಿಸಿದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿದರು. ಕು.ಪ್ರೀತಿ ಧನ್ಯವಾದಗೈದರು.
Kshetra Samachara
09/03/2022 09:54 pm