ಪಂಜಿಮೊಗರು:14.48 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಂಜಿಮೊಗರು ವಾರ್ಡ್ 12ರ ಪಡುಕೋಡಿ ಗ್ರಾಮದ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ರಸ್ತೆ ನಿರ್ಮಾಣ ಮತ್ತು ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಕಾವೂರು ಮಹಾಶಕ್ತಿ ಕೇಂದ್ರ ಪ್ರಮುಖ್ ವಿವೇಕಾನಂದ ಸುವರ್ಣ, ಶಕ್ತಿ ಕೇಂದ್ರ ಪ್ರಮುಖ್ ಧನಕೀರ್ತಿ ಶೆಟ್ಟಿ, ಪ್ರಜ್ಞೇಶ್ ಶೆಟ್ಟಿ, ಹಿರಿಯ ಮುಖಂಡರಾದ ರಮೇಶ್ ಶೆಟ್ಟಿ, ಗಣೇಶ್ ಶೆಟ್ಟಿ, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಾನವಾಜ್ , ಉಮೇಶ ಪೂಜಾರಿ, ಬೂತ್ ಅಧ್ಯಕ್ಷ ರಮೇಶ್ ಪೂಜಾರಿ ಚೇತನ್ ಕುಮಾರ್ ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಅಧ್ಯಕ್ಷ ತುಕರಾಮ ಸಮಿತಿಯ ಪುರಂದರದಾಸ್, ರುಕ್ಮಯ, ಕನಕದಾಸ್ , ತುಳಸಿದಾಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
19/02/2022 02:47 pm