ಬಜಪೆ:ಗ್ರಾಮಾಭಿವೃದ್ಧಿಯ ಪ್ರತಿಯೊಂದು ಕೆಲಸಕ್ಕೂ ಗ್ರಾಮದ ಸದಸ್ಯರ ಸಹಕಾರ ಅತ್ಯವಶ್ಯ ಎಂದು ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಹೇಳಿದರು.ಅವರು ಅಡ್ಡೂರು ಜಂಕ್ಷನ್‍ನಲ್ಲಿ 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ 9 ಲಕ್ಷ ರೂ ವೆಚ್ಚದಲ್ಲಿ ವ್ಯವಸ್ಥೆಗೊಳಿಸಲಾದ ನೂತನ ವ್ಯಾಯಾಮ ಶಾಲೆಯನ್ನು(ಜಿಮ್) ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಜಿ.ಪಂ ನಿಕಟಪೂರ್ವ ಸದಸ್ಯ ಯು ಪಿ ಇಬ್ರಾಹಿಂ, ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಸಾಹಿಕ್, ಬಬಿತಾ, ಎಡ್ಲಿನ್ ಕ್ಲೀಟಾ ಡಿ'ಸೋಜ, ಬಾಲಕೃಷ್ಣ ಕೋಟ್ಯಾನ್, ಸದಾಶಿವ ಶೆಟ್ಟಿ, ಎ ಕೆ ಅಶ್ರಫ್, ಎ ಕೆ ರಿಯಾಝ್, ಮನ್ಸೂರ್, ಬುಶ್ರಾ, ಅಝ್ಮೀನಾ, ಮರಿಯಮ್ಮ, ಅಡ್ಡೂರು ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ, ಗೌರವಾಧ್ಯಕ್ಷ ಎ ಎಸ್ ಬಾವುಞ, ಜಲೀಲ್, ಜಯಲಕ್ಷ್ಮೀ, ಎ ಕೆ ಮೊಹಮ್ಮದ್, ಕಟ್ಟಡ ಮಾಲಕ ಜಿ ಪಿ ಹಮ್ಮಬ್ಬ, ಗಣ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Kshetra Samachara
15/02/2022 07:25 pm