ಬಜಪೆ:ಎಕ್ಕಾರು ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ವಿಜಯ ಯುವ ಸಂಗಮ ಎಕ್ಕಾರು ಇದರ 25 ನೇ ವಾರ್ಷಿಕೋತ್ಸವವು ನಡೆಯಿತು.ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಉಮೇಶ್ ಪಂಬದ ,ಬಡಕರೆ ಶ್ರೀ ಜಾರಂದಾಯ ದೈವಸ್ಥಾನದ ಮೊಕ್ತೇಸರ ಗೋಪಾಲ ಶೆಟ್ಟಿ ಬಡಕರೆ ಹಾಗೂ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಯನ್ ವೈ ಶೆಟ್ಟಿ ಕಟೀಲು ಇವರುಗಳನ್ನು ಸಂಮಾನಿಸಲಾಯಿತು.
ವೇದಿಕೆಯಲ್ಲಿ ಎಕ್ಕಾರು ಗೋಪಾಲಕೃಷ್ಣ ಮಠದ ವೆ.ಮೂ.ಹರಿದಾಸ ಉಡುಪ,ಎಕ್ಕಾರು ಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ,ಮಾಜಿ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ,ವಿಜಯ ಯುವ ಸಂಗಮದ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು,ಅಧ್ಯಕ್ಷ ಅದರ್ಶ್ ಶೆಟ್ಟಿ ಎಕ್ಕಾರು,ಈಶ್ವರ್ ಕಟೀಲ್, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು,ಉದ್ಯಮಿ ಕೃಷ್ಣ ಡಿ.ಶೆಟ್ಟಿ,ಚಂದ್ರಹಾಸ್ ಶೆಟ್ಟಿ ಹೊಸಹೊಕ್ಲು ಬಡಕರೆ ಗುತ್ತು,ಶಂಭು ಶೆಟ್ಟಿ ಮಾಡರಮನೆ,ತಾರನಾಥ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಕಳ್ಳಿಗೆ,ರಾಜೇಂದ್ರ ಪ್ರಸಾದ್ ,ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿ,ನಿತೇಶ್ ಶೆಟ್ಟಿ ವಂದಿಸಿದರು.ನಂತರ ವಿಜಯ ಯುವ ಸಂಗಮದ ಸದಸ್ಯರಿಂದ ಪಿರ ಬನ್ನಗ ಎಂಬ ತುಳುನಾಟಕ ಪ್ರದರ್ಶನ ಗೊಂಡಿತು.
Kshetra Samachara
15/02/2022 04:01 pm