ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ - ಶಾಸಕ ಡಾ.ಭರತ್ ಶೆಟ್ಟಿ

ಬಜಪೆ:ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಹೊಸ ರಸ್ತೆಯಿಂದ ಈ ಭಾಗದ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಹೇಳಿದರು.

ಅವರು ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಬಡಕರೆ ಶ್ರೀ ಕೋರ್ದಬ್ಬು ದೈವಸ್ಥಾನದವರೆಗೆ 11 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.

2021-22ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ಬಂಧಿತ(ಸಂಯುಕ್ತ) ಕಾಮಗಾರಿಗಳ ಕ್ರೀಯಾ ಯೋಜನೆ ಪರಿಶಿಷ್ಟ ಜಾತಿ ಕಾಮಗಾರಿ ಯೋಜನೆಯಡಿಯಲ್ಲಿ ನಿರ್ಮಾಣವಾದ ರಸ್ತೆ ಇದಾಗಿದೆ.

ಈ ಸಂದರ್ಭ ಪಂಚಾಯತ್ ಸದಸ್ಯರಾದ ಜಿ ಎಂ ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ ಹಾಗೂ ಮುಖಂಡರಾದ ಪುರಂದರ ಮಲ್ಲಿ, ಶ್ರೀಕರ ಶೆಟ್ಟಿ, ವಿನಯ್ ಸುವರ್ಣ, ಜಯರಾಮ ಕೋಟ್ಯಾನ್, ಸೇಸಮ್ಮ, ಜಲಜಾ, ಸೋಮಯ್ಯ ಗುರುಪುರ, ಶೋಭಾ ಡಿ ನಡುಗುಡ್ಡೆ, ಹೋಟೆಲ್ ಉದ್ಯಮಿ ಸುಧೀರ್ ಕಾಮತ್, ಸಾದಿಕ್ ಅಡ್ಡೂರು, ರಾಜೇಶ್ ಶೆಟ್ಟಿ, ಹೇಮಚಂದ್ರ, ಸತೀಶ್ ಕಾವ, ಜಿ ಕೆ ನರಸಿಂಹ ಪೂಜಾರಿ, ರೋಹಿತಾಶ್ವ ಭಂಡಾರಿ, ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/02/2022 04:20 pm

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ