ಕೃಷ್ಣಾಪುರ:ಸರಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸ್ಥಳೀಯ ಕೈಗಾರಿಕೆಗಳು ಮುಂದೆ ಬಂದು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಶೆಟ್ಟಿ ಹೇಳಿದರು.
ಅವರು ಇಂದು ಮನಪಾ ವ್ಯಾಪ್ತಿಯ ಕೃಷ್ಣಾಪುರ 4ನೇ ವಾರ್ಡ್‍ನಲ್ಲಿ ಕೃಷ್ಣಾಪುರ 5ನೇ ವಿಭಾಗದ ಸರಕಾರಿ ಪ್ರೌಢ ಶಾಲೆಗೆ ಎಂ.ಆರ್.ಪಿ.ಎಲ್. ಓ.ಎನ್.ಜಿ.ಸಿ.ಸಂಸ್ಥೆಯು ಸುಮಾರು *30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸಭಾಭವನ ಉದ್ಘಾಟಿಸಿ* ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡುವತ್ತ ಗಮನ ಹರಿಸಬೇಕು ಎಂದರು. ಮ.ನ.ಪಾ ಸದಸ್ಯೆ ಲಕ್ಷ್ಮೀ ಶೇಖರ ದೇವಾಡಿಗ, ಉತ್ತರ ಮಂಡಲ ಭಾಜಪಾ ಅಧ್ಯಕ್ಷರಾದ ತಿಲಕ್‍ರಾಜ್ ಕೃಷ್ಣಾಪುರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಧುಸೂದನ್, ಎಂ ಅರ್ ಪಿ ಎಲ್ ಅಧಿಕಾರಿ ಶ್ರೀಶ ಕರ್ಮರನ್, ಮನಪಾ ಅಭಿಯಂತರ ಲಾವಣ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಝಾಹಿದಾ ಮುತಹರ, ರಾಘವೆಂದ್ರ, ನಾರಾಯಣ ಶೆಟ್ಟಿಗಾರ್ ಉಪಸ್ಥಿತರಿದ್ದರು.
Kshetra Samachara
29/01/2022 03:37 pm