ಬಜಪೆ:ಶ್ರೀ ಕ್ಷೇತ್ರ ಪೆರಾರ ಶ್ರೀ ಬಲವಾಂಡಿ ದೈವಸ್ಥಾನ ದ ಬಂಟ ಕಂಬ ರಾಜಾಂಗಣದ ಜೀರ್ಣೋದ್ಧಾರ ಕಾಮಗಾರಿಯ ಶಿಲಾ ಮತ್ತು ದಾರು ಮುಹೂರ್ತವು ಸಾಂಪ್ರದಾಯಿಕವಾಗಿ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರ ದ ಪೆರ್ಗಡೆಯವರಾದ ಗಂಗಾಧರ ರೈ ಮುಂಡಬೆಟ್ಟುಗುತ್ತು,ಇವರ ನೇತೃತ್ವದಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಬ್ರಾಣಬೆಟ್ಟು ಗುತ್ತು ಪ್ರತಾಪ್ ಚಂದ್ರ ಶೆಟ್ಟಿ ,ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷರಾದ ಶಿವಾಜಿ ಶೆಟ್ಟಿ ಕೊಳಕೆಬೈಲ್,ಆಡಳಿತಾಧಿಕಾರಿ ಸಾಯೀಶ್ ಚೌಟ,ಸಮಿತಿಯ ಸದಸ್ಯರು ಹಾಗು ಹದಿನಾರು ಗುತ್ತಿನವರು,ವಿಲೇದಾರರು, ಊರಿನ ಗ್ರಾಮಸ್ಥರ ಉಪಸ್ಥಿತರಿದ್ದರು.
Kshetra Samachara
18/11/2021 02:44 pm