ಬಂಟ್ವಾಳ: ಸಿಪಿಎಂ ಪಕ್ಷದ ತಾಲೂಕು ಮಟ್ಟದ 23ನೇ ಸಮ್ಮೇಳನ ಬಂಟ್ವಾಳ ಮಿನಿವಿಧಾನಸೌಧ ಮುಂಭಾಗ ನಡೆಯಿತು. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಈ ಸಂದರ್ಭ ಮಾತನಾಡಿ, ದುಡಿಯುವ ಜನರು ಇತಿಹಾಸ ಅರ್ಥಮಾಡಿಕೊಂಡು ಹೋರಾಟಕ್ಕೆ ಕೈಜೋಡಿಸಬೇಕು, ಕೇಂದ್ರ ಸರ್ಕಾರವಿಂದು ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಖಾಸಗಿಕರಣ ಮೂಲಕ ಬಂಡವಾಳಶಾಹಿಗಳ ಹಿತ ಕಾಯುತ್ತಿದೆ. ಭೂಸುಧಾರಣೆ ಕಾನೂನು ಜಾರಿಯಾಗಲು ಕಮ್ಯೂನಿಷ್ಟರ ನೇತೃತ್ವದಲ್ಲಿ ಗೇಣಿದಾರರ ಪ್ರಬಲ ಹೋರಾಟ ಅಂದು ಬಂಟ್ವಾಳದಲ್ಲೇ ಆರಂಭಗೊಂಡಿತ್ತು. ಕಮ್ಯೂನಿಷ್ಟರ ನಿರಂತರ ಹೋರಾಟದಿಂದ ಭೂಸುಧಾರಣೆ ಜಾರಿಗೊಂಡಿತ್ತು ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ತಾಲೂಕು ಸಮಿತಿ ಸದಸ್ಯ ಉದಯಕುಮಾರ್ ಬಂಟ್ವಾಳ ವಂದಿಸಿದರು.
ಪಕ್ಷದ ಹಿರಿಯ ಸದಸ್ಯರಾದ ಶಿವರಾಯ ಪ್ರಭು ಧ್ವಜಾರೋಹಣ ನಡೆಸಿದರು. ಜೆ.ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು, ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ರಾಜಾ ಚೆಂಡ್ತಿಮಾರ್, ಅಧ್ಯಕ್ಷರಾದ ಉದಯಕುಮಾರ್ ಬಂಟ್ವಾಳ ,ಹಿರಿಯ ಮುಖಂಡರಾದ ಬಿ.ವಾಸು ಗಟ್ಟಿ ಹಾಗೂ ಸಂಜೀವ ಬಂಗೇರ, ಸ್ವಾಗತ ಸಮಿತಿ ಕೋಶಾಧಿಕಾರಿ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯದರ್ಶಿಯಾಗಿ ರಾಮಣ್ಣ ವಿಟ್ಲ ಪುನರಾಯ್ಕೆಯಾದರು ಸದಸ್ಯರುಗಳಾಗಿ ಉದಯಕುಮಾರ್ ಬಂಟ್ವಾಳ, ದಿನೇಶ್ ಆಚಾರಿ ಮಾಣಿ, ತುಳಸೀದಾಸ್ ವಿಟ್ಲ, ಅಪ್ಪುನಾಯ್ಕ ನೀರಪಾದೆ, ದೇವಪ್ಪ ಗೌಡ ಕನ್ಯಾನ , ಶಿವರಾಯ ಪ್ರಭು, ಲೋಲಾಕ್ಷಿ ಬಂಟ್ವಾಳ ಆಯ್ಕೆಯಾದರು.
Kshetra Samachara
17/11/2021 05:44 pm