ಬಜಪೆ:ಕಟೀಲು - ಬಜಪೆ ರಾಜ್ಯ ಹೆದ್ದಾರಿ 67 ರ ಎಕ್ಕಾರು ಬೂತಗುಂಡಿ ಎಂಬಲ್ಲಿ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡ ಉಂಟಾಗಿ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರ ರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.ಕಟೀಲಿನಿಂದ ಎಕ್ಕಾರು ಕಡೆಗೆ ಸಂಚರಿಸುವ ರಾಜ್ಯ ಹೆದ್ದಾರಿಯ ಬೂತಗುಂಡಿ ಎಂಬಲ್ಲಿನ ರಸ್ತೆಯ ತಿರುವಿನಲ್ಲಿ ದೊಡ್ಡ ಗಾತ್ರದ ಹೊಂಡವು ವಾಹನ ಸವಾರ ರಿಗೆ ಗೋಚರಿಸುವುದು ಅಸಾಧ್ಯವಾಗಿದೆ.ದ್ವಿಚಕ್ರ ವಾಹನ ಸವಾರ ರು ರಸ್ತೆಯಲ್ಲಿನ ಹೊಂಡವನ್ನು ತಪ್ಪಿಸಿ ಅಪಾಯಕಾರಿ ರೀತಿಯಲ್ಲಿ ಸಂಚರಿಸಬೇಕಾಗಿದೆ.ರಾತ್ರಿ ಸಮಯದಲ್ಲಂತೂ ರಸ್ತೆಯಲ್ಲಿ ಹೊಂಡವಿರುವುದೇ ಗೊತ್ತಾಗದೆ ದ್ವಿಚಕ್ರ ವಾಹನ ಸವಾರ ರೊಬ್ಬರು ಬಿದ್ದ ಘಟನೆಯು ನಡೆದಿತ್ತು.ಕೂಡಲೇ ರಾಜ್ಯ ಹೆದ್ದಾರಿಯಲ್ಲಿನ ಬೃಹತ್ ಗಾತ್ರದ ಹೊಂಡವನ್ನು ಮುಚ್ಚುವ ಕಾರ್ಯ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
07/10/2021 01:08 pm