ಬಂಟ್ವಾಳ: ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಶನಿವಾರ ಬಿಜೆಪಿ ಬಂಟ್ಚಾಳ ಕ್ಷೇತ್ರ ಕಚೇರಿಯಲ್ಲಿ ನಡೆಯಿತು.
ಅಂತ್ಯೋದಯ ಕಲ್ಪನೆಯೊಂದಿಗೆ ಪಕ್ಷ ಕಟ್ಟಿದ ದೀನ್ ದಯಾಳ್ ಉಪಾಧ್ಯಾಯ ಕನಸುಗಳು ಇಂದು ಸಾಕಾರಗೊಳ್ಳುತ್ತಿವೆ ಎಂದು ಕಾರ್ಯಕ್ರಮಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಪ್ರಧಾನ ಭಾಷಣ ಮಾಡಿದ ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ,
ದೇಶ ಮತ್ತೆ ಎದ್ದು ನಿಲ್ಲಬೇಕಾದರೆ ಸ್ವಾವಲಂಬಿ, ಆತ್ಮನಿರ್ಭರ ಭಾರತ ಅಗತ್ಯ ಎಂಬ ಪರಿಕಲ್ಪನೆ ಹುಟ್ಟುಹಾಕಿದವರು ದೀನ್ ದಯಾಳ್ ಉಪಾಧ್ಯಾಯರು ಎಂದರು. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಮಾಡುವ ಪಕ್ಷವಾಗಿ ಬಿಜೆಪಿ ರಚನೆಯಾಗಿದೆ. ರಾಷ್ಟೀಯ ಶಿಕ್ಷಣ ನೀತಿಯನ್ವಯ ಪಠ್ಯ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತದೆ. ಹೀಗಾಗಿ ಅದನ್ನು ನಾವು ಬೆಂಬಲಿಸಬೇಕಿದೆ. ಟೀಕಾಕಾರರಿಗೆ ತಾಪಂ, ಜಿಪಂ ಚುನಾವಣೆಯಲ್ಲಿ ಉತ್ತರಿಸೋಣ ಎಂದು ಹೇಳಿದರು. ಫ್ಲೆಕ್ಸ್ ಹಾಕುವುದರ ಮೂಲಕ ಜನ್ಮದಿನೋತ್ಸವ ಆಚರಣೆ ಅಲ್ಲ, ಜನಸೇವೆ ಮಾಡುವ ಮೂಲಕ ಆಚರಿಸಬೇಕು ಎಂಬ ನಿತಿನ್ ಗಡ್ಕರಿ ಮಾತು ಉಲ್ಲೇಖಿಸಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ಚಾಳ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವೇದಿಕೆಯಲ್ಲಿ ಇದ್ದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.
Kshetra Samachara
25/09/2021 04:09 pm