ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಜಿಲ್ಲಾಡಳಿತದಿಂದ ತುಘಲಕ್ ನೀತಿ: ಬಂಟ್ವಾಳದಲ್ಲಿ ವಿಹಿಂಪ, ಬಜರಂಗದಳ ಆರೋಪ

ಬಂಟ್ವಾಳ: ಹಿಂದು ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳನ್ನು ಹೊತ್ತು ಗೊತ್ತು ಇಲ್ಲದ ವೇಳೆಯಲ್ಲಿ ತೆರವುಗೊಳಿಸಿದ ಮೈಸೂರಿನ ಜಿಲ್ಲಾಡಳಿತ ದ ಕ್ರಮವನ್ನು ತುಘಲಕ್ ನೀತಿ ಎಂದು ಬಂಟ್ವಾಳ ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಟೀಕಿಸಿದೆ.

ಈ ಕುರಿತು ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಇದರ ವಿರುದ್ದವಾಗಿ ಕಾರ್ಯಚರಣೆ ನಡೆಸಿದರೆ ಉಗ್ರವಾದ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಮುಖರಾದ ಪದ್ಮನಾಭ ಕಟ್ಟೆ, ಸುರೇಶ್ ಬೆಂಜನಪದವು, ಲೋಹಿತ್ ಪಣೋಲಿಬೈಲು, ಮಿಥುನ್ ಕಲ್ಲಡ್ಕ, ಶಿವಪ್ರಸಾದ್ ತುಂಬೆ, ಅಮಿತ್ ಕಲ್ಲಡ್ಕ, ಸಂತೋಷ್ ಸರಪಾಡಿ, ಪ್ರಸಾದ್ ಬೆಂಜನಪದವು, ವಿನಿತ್ ತುಂಬೆ, ಪ್ರವೀಣ್ ಕುಂಟಾಲಪಲ್ಕೆ, ದೀಪಕ್ ಅಜೆಕಲ, ಅಶ್ವಥ್ ಪುಂಜಾಲಕಟ್ಟೆ ಸಂದೀಪ್ ಬಂಟ್ವಾಳ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/09/2021 07:07 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ