ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಿತ ಕಾಲೇಜಿನಲ್ಲಿ ಒಟ್ಟು ಸೇರಿದ ಸಜಿಪ ಪಿಯು ಕಾಲೇಜಿನ 1994-95 ವಿದ್ಯಾರ್ಥಿಗಳು

ಬಂಟ್ವಾಳ: ಸಜಿಪ ಪದವಿ ಪೂರ್ವ ಕಾಲೇಜಿಗೆ 1994-95 ಬ್ಯಾಚ್ ನ ವಿದ್ಯಾರ್ಥಿಗಳಿಂದ ಕಂಪ್ಯೂಟರ್, ಪ್ರಿಂಟರ್. ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಾಯಿತು. ಈ ಸಂದರ್ಭ 28 ವರ್ಷಗಳಿಂದ ಕರ್ತವ್ಯ ಸಲ್ಲಿಸಿ ಈಗ ಪ್ರಿನ್ಸಿಪಾಲ್ ಆಗಿರುವ ಬಾಬು ಗಾವಂಕರ್ ಅವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಪೊಲೀಸ್ ಸೇವೆಯಲ್ಲಿ ಸಿಎಂ ಚಿನ್ನದ ಪದಕ ಪಡೆದ ಅಬ್ದುಲ್ ಜಬ್ಬಾರ್ ಅವರನ್ನು ಅಭಿನಂದಿಸಲಾಯಿತು. ಅಗಲಿದ ಗಣ್ಯರಾದಸದಾನಂದ ಪೂಂಜಾ, ತಾರಾನಾಥ್ ಸಜಿಪ, ಕಿರಣ್ ಅಲಾಡಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಜಿಪ, ಮಹಾಬಲ ರೈ, ಸುರೇಶ್ ಶೆಟ್ಟಿ, ವಿಶ್ವನಾಥ್ ಕೊಟ್ಟಾರಿ, ತಂತ್ರಿಗಳಾದ ಸುಬ್ರಮಣ್ಯ ಭಟ್, ಪ್ರಿನ್ಸಿಪಾಲ್ ಬಾಬು ಗಾವ0ಕರ್ ಉಪಸ್ಥಿತರಿದ್ದರು. ವಕೀಲರಾದ ರೋಷನ್, ಬ್ಯಾಂಕ್ ಮೆನೇಜರ್ ಪುರಂದರ್ ಸಜಿಪ, ಪಿ. ಡಿ. ಓ ನಾಗೇಶ್ ಮಾರ್ತಾಜೆ, ಪೊಲೀಸ್ ಹೆಡ್ ಕಾನ್ಸ್ಟಬಲ್ ಶಾಂತಪ್ಪ ಬಾಬು, ಪ್ರಮೀಳಾ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಉಪನ್ಯಾಸಕ ವಿಷ್ಣು ಮಯ್ಯ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸುಕುಮಾರ್ ಬಂಟ್ವಾಳ್ ಪ್ರಸ್ತಾವನೆಗೈದರು, ಶಿವಪ್ರಸಾದ್ ಶೆಟ್ಟಿ ಮತ್ತು ಪ್ರಮೀಳಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು. ನಾಗಪ್ಪ ಪಣೋಲಿಬೈಲು ವಂದಿಸಿದರು.

Edited By : PublicNext Desk
Kshetra Samachara

Kshetra Samachara

15/09/2021 03:36 pm

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ