ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ವಿಕೇಂಡ್ ಕರ್ಫ್ಯೂಗೆ ಸ್ತಬ್ಧಗೊಂಡ ಜನತೆ

ಬಜಪೆ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಟೀಲು- ಎಕ್ಕಾರು- ಪೆರ್ಮುದೆ- ಬಜಪೆ- ಕೈಕಂಬ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ಅಂಗಡಿಗಳು ಮಧ್ಯಾಹ್ನ 2ರ ತನಕ ಓಪನ್ ಆಗಿತ್ತು. ಮಧ್ಯಾಹ್ನ ನಂತರ ಸ್ತಬ್ಧವಾಗಿತ್ತು. ಇಂದು ಭಾನುವಾರವಾದ್ದರಿಂದ ಬೆಳಿಗ್ಗಿನ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ಕೆಲ ಕಡೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಧರಿಸದೆ ಇದ್ದುದು ಕಂಡುಬಂದಿತ್ತು. ಒಟ್ಟಾರೆಯಾಗಿ ವಿಕೇಂಡ್ ಕರ್ಫ್ಯೂನ ಬಿಸಿ ಗ್ರಾಮೀಣ ಭಾಗಕ್ಕೂ ತಟ್ಟಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಮಾಸ್ಕ್ ಧರಿಸಿಕೊಂಡು ಅಗತ್ಯದ ವಸ್ತುಗಳನ್ನು ಖರೀದಿಗಾಗಿ ಬರುತ್ತಿರುವುದು ಕಂಡುಬಂದಿದೆ. ಆದರೆ ನಗರ ಪ್ರದೇಶಗಳಲ್ಲಿ ಬೆರಳೆಣೆಕೆಯ ಜನರು ಮಾತ್ರ ಮಾಸ್ಕ್ ಧರಿಸಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು ಕಡಿಮೆಯಾಗಬೇಕು. ಸರಕಾರದ ಕೋವಿಡ್ ನಿಯಮಗಳನ್ನು ನಾಗರೀಕರಾದ ನಾವೆಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.ಅದಷ್ಟುಜಾಗರೂಕತೆಯಿಂದ ಇದ್ದರೆ ಕೊರೊನಾವೆಂಬ ಮಹಾಮಾರಿಯನ್ನು ಓಡಿಸಬಹುದು.

Edited By : PublicNext Desk
Kshetra Samachara

Kshetra Samachara

22/08/2021 10:13 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ