ಬಂಟ್ವಾಳ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮ ಹಿನ್ನೆಲೆಯಲ್ಲಿ ಕರೋಪಾಡಿ ಗ್ರಾಮ ಸಮಿತಿ ವತಿಯಿಂದ ಮನೆ ಮನೆ ಭಜನಾ ಕಾರ್ಯಕ್ರಮ ನಡೆಯಿತು. ಮಾರ್ಚ್ ತಿಂಗಳಲ್ಲಿ ಗ್ರಾಮದಲ್ಲಿ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಭಜಕರು ಮನೆ ಮನೆಗಳಿಗೆ ತೆರಳಿ ಒಡಿಯೂರು ಶ್ರೀಗಳ ಸಂದೇಶವನ್ನು ಸಾರಿದರು. ಒಟ್ಟು ಆರು ವಾರ್ಡುಗಳಿಗೆ ಸಂಬಂಧಿಸಿ 780 ಮನೆಗಳಿಗೆ ಕಾಲ್ನಡಿಗೆಯಲ್ಲಿ ಸಾಗಿದ ಗ್ರಾಮದ ವಿವಿಧ ಭಜನಾ ಮಂದಿರ, ಮಂಡಳಿಗಳ ಸದಸ್ಯರು ಕೀರ್ತನೆಯ ಮೂಲಕ ಜ್ಞಾನವಾಹಿನಿಯ ಸಂದೇಶ ನೀಡಿದರು. ಮಾರ್ಚ್ 29ರ ಭಾನುವಾರ ಬೇಡಗುಡ್ಡೆ, ಏಪ್ರಿಲ್ 4ರಂದು ಒಡಿಯೂರು, ಮಿತ್ತನಡ್ಕ, ಪದ್ಯಾಣ, ಕುಡ್ಪಲ್ತಡ್ಕ, ಗುಂಡಮಜಲು ಹೀಗೆ ವಿವಿಧೆಡೆಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನದ ಹೊತ್ತಿನಲ್ಲಿ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಸಂಕೀರ್ತನೆಯೊಂದಿಗೆ ಮನೆ ಮನೆ ಸಂಪರ್ಕ ಜೊತೆಗೆ ಒಡಿಯೂರು ಶ್ರೀಗಳ ಸಂದೇಶ ತಲುಪಿಸುವ ಕಾರ್ಯಕ್ರಮ ಹಾಗೆಯೇ ಭಜನೆಯ ಮೂಲಕ ಜಾಗೃತಿ ಕಾರ್ಯ ಇದರೊಂದಿಗೆ ಸಂಪನ್ನಗೊಂಡಿತು.
Kshetra Samachara
22/08/2021 02:32 pm