ಧರ್ಮಸ್ಥಳ: ಕಾಸರಗೋಡು ಶ್ರೀ ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಯತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ(ಜಯರಾಮ ಮಂಜತ್ತಾಯ) ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ , ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು.
ಬಳಿಕ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕ್ಷೇತ್ರದ ಪರವಾಗಿ ಡಾ.ಹೆಗ್ಗಡೆಯವರು ಗೌರವ ಅರ್ಪಿಸಿದರು.
ಈ ವೇಳೆ ಎಡನೀರು ಮಠದ ನಿಯೋಜಿತ ಯತಿಗಳನ್ನು ಕ್ಷೇತ್ರದ ಸಕಲ ಗೌರವಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ,ಪಾರುಪತ್ತೇದಾರ ಲಕ್ಸ್ಮಿನಾರಾಯಣ ರಾವ್,ಸೀತಾರಾಮ ತೋಳ್ಪಡಿತ್ತಾಯ ಸ್ವಾಗತಿಸಿದರು.
ಕುಂಟಾರು ರವೀಶ್ ತಂತ್ರಿ ,ಗೋಕುಲ ಅಡಿಗ, ರಾಜೇಂದ್ರ ಕಲ್ಲೂರಾಯ ,ಉಜಿರೆ ಅಶೋಕ ಭಟ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
28/09/2020 07:31 pm