ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಲಪಾಡಿ: "ಎರಡು ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ರಹಿತ ವಾಹನ ಸಂಚಾರಕ್ಕೆ ಅವಕಾಶ ನೀಡಿ"

ಮಂಗಳೂರು: ಫಾಸ್ಟ್ ಟ್ಯಾಗ್ ಇಲ್ಲದೇ ಸಂಚರಿಸುವ ವಾಹನಗಳಿಗೆ ತಲಪಾಡಿ ಟೋಲ್ ಗೇಟ್ ನಲ್ಲಿ ತಲಾ ಎರಡು ಗೇಟುಗಳ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ತಲಪಾಡಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ತಲಪಾಡಿ ನವಯುಗ ಟೋಲ್ ಕೇಂದ್ರ ದ ವ್ಯವಸ್ಥಾಪಕರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಮನವಿ ಅರ್ಪಿಸಲಾಯಿತು.

ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಡಿವೈಎಫ್ಐ ಮುಖಂಡ ಅಶ್ರಫ್ ಕೆ.ಸಿ. ರೋಡ್, ಡಿಸಿಸಿ ಸದಸ್ಯ ಬಿ.ಎಸ್.ಇಸ್ಮಾಯಿಲ್, ಟಿ.ಎ.ಟಿ. ಖಾದರ್, ನಾಗರಿಕ ಹೋರಾಟ ಸಮಿತಿ ಸದಸ್ಯ ಇಸ್ಮಾಯಿಲ್ ತಲಪಾಡಿ, ಹಸನ್ ತಲಪಾಡಿ,ಕೆ.ಪಿ.ಹಾಸಿಂ, ಅಬ್ದುಲ್ ರಹಿಮಾನ್ ತಲಪಾಡಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

04/10/2020 11:47 am

Cinque Terre

10 K

Cinque Terre

0

ಸಂಬಂಧಿತ ಸುದ್ದಿ