ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾಪುರ 7ಬ್ಲಾಕ್ ಕೇಂದ್ರ ಜುಮಾ ಮಸೀದಿಯಲ್ಲಿ ಸರಳ ಈದ್ ಮೀಲಾದ್ ಆಚರಣೆ

ಕೃಷ್ಣಾಪುರ: ಬದ್ರಿಯಾ ಜುಮಾ ಮಸೀದಿಯ ಮುಸ್ಲಿಂ ಜಮಾತ್ ನ 7ನೇ ಬ್ಲಾಕ್ ಮೀಲಾದುನ್ನೆಬಿ ಸರಳವಾಗಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ಆಚರಿಸಲಾಯಿತು.

ಮೀಲಾದುನ್ನೆಬಿಯನ್ನು ಸುರಕ್ಷಿತ ಅಂತರ ಪಾಲಿಸಿಕೊಂಡು ಆಚರಿಸುವ ಉದ್ದೇಶದಿಂದ 7ಬ್ಲಾಕ್ ನ ಕೇಂದ್ರ ಜುಮಾ‌ ಮಸೀದಿ‌ಯ ಅಧೀನದಲ್ಲಿರುವ ಬದರುಲ್ ಹುದಾ ಜುಮಾ ಮಸೀದಿ, ಈದ್ಗಾ ಜುಮಾ ಮಸೀದಿ, ಮಸ್ಜಿದ್ ತ್ವೈಬಾ ಜುಮಾ ಮಸೀದಿ, ಮಸ್ಜಿದುಲ್ ಬದ್ರಿಯಾ ಜುಮಾ ಮಸೀದಿ ಮತ್ತು ಮಸ್ಜಿದುಲ್ ಹುದಾ ಜುಮಾ ಮಸೀದಿಗಳಲ್ಲಿ ಆಯಾ ಪ್ರದೇಶದ ಜನರು ಸೇರಿಕೊಂಡು ಮೌಲೂದ್ ಪಾರಾಯಣ ಮತ್ತು ಮನೆ ಮನೆಗೆ ಅನ್ನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿಯ ಸಂಯುಕ್ತ ಖಾಝಿ ಅಲ್ ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಮೌಲಾನಾ ಉಮರ್ ಫಾರೂಕ್ ಸಖಾಫಿ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಲ್ ಹಾಜ್ ಬಿ.ಎಂ. ಮುಮ್ತಾಝ್ ಅಲಿ, ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎಂ. ಉಸ್ಮಾನ್, ಹಾಜಿ ಟಿ.ಎಂ. ಶರೀಫ್, ಹಾಜಿ ಬಿ.ಎಂ. ಹುಸೈನ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಜಮಾತಿನ ಪದಾಧಿಕಾರಿಗಳು ಮತ್ತು ಮದ್ರಸ ಮುಅಲ್ಲಿಮರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/10/2020 10:14 am

Cinque Terre

6.47 K

Cinque Terre

0

ಸಂಬಂಧಿತ ಸುದ್ದಿ