ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಗ್ರಾಮಗಳ ಅಭಿವೃದ್ಧಿ ಸರಕಾರದ ಮೂಲಮಂತ್ರ, ಹಳ್ಳಿ - ಹಳ್ಳಿಗೆ ಮೂಲ ಸೌಕರ್ಯ ಒದಗಿಸಲು ಪ್ರಯತ್ನ"

ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮೈಲೊಟ್ಟು ಬಳಿ ಶಾಸಕರ ಹಾಗೂ ಜಿಪಂ ನ 9.50 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆಯನ್ನು ಜಿಪಂ ಸದಸ್ಯ ವಿನೋದ್ ಬೊಳ್ಳೂರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿ ಸರಕಾರದ ಮೂಲ ಮಂತ್ರವಾಗಿದ್ದು, ಸರಕಾರದಿಂದ ಹಳ್ಳಿ-ಹಳ್ಳಿಗಳಿಗೆ ಮೂಲ ಸೌಕರ್ಯ ಒದಗಿಸಲು ಮತ್ತಷ್ಟು ಪ್ರಯತ್ನಿಸಲಾಗುವುದು ಎಂದರು.

ತಾಪಂ ಸದಸ್ಯ ಶರತ್ ಕುಬೆವೂರು, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ರವಿ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ, ಪಂ. ಮಾಜಿ ಸದಸ್ಯರಾದ ಮನೋಹರ ಕೋಟ್ಯಾನ್, ಹರೀಶ್ ಶೆಟ್ಟಿ ಶಿಮಂತೂರು, ಸ್ಥಳೀಯರಾದ ಉದಯ ಅಮೀನ್, ಸಾಧು ಅಂಚನ್, ರತ್ನಾಕರ ಕೋಟ್ಯಾನ್, ಜಯ ಕುಮಾರ್, ಕಿಶೋರ್ ಶೆಟ್ಟಿ ಶಿಮಂತೂರು, ರವೀಶ್ ಕಾಮತ್, ವಿನಯ ಕುಮಾರ್, ನರೇಶ್ ಕುಮಾರ್, ಶ್ರುತಿ ಕುಂದರ್, ರಮೇಶ್ ಹೊಸಕೊಪ್ಪಲ, ಶೇಖರ ಪೂಜಾರಿ, ವಸಂತ್ ಗುತ್ತಿಗೆದಾರ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

04/10/2020 08:33 am

Cinque Terre

10.01 K

Cinque Terre

0

ಸಂಬಂಧಿತ ಸುದ್ದಿ