ಮುಲ್ಕಿ: ಅತಿಕಾರಿಬೆಟ್ಟು ಗ್ರಾ ಪಂ ವ್ಯಾಪ್ತಿಗೊಳಪಟ್ಟ ಮಟ್ಟು, ಕಕ್ವ, ಬಾನೊಟ್ಟು ಭಾಗದ ಜನರ ಬಹುದಿನಗಳ ಬೇಡಿಕೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 14 ಲಕ್ಷ ರೂ. ಮೊತ್ತದ ದ.ಕ. ಜಿಪಂ ಅನುದಾನದಲ್ಲಿ ನೀರಿನ ಟ್ಯಾಂಕ್ (ಒಎಚ್ ಟಿ) ಬೋರ್ ವೆಲ್ ಹಾಗೂ ಪೈಪ್‌ಲೈನ್ ವಿಸ್ತರಣೆ ಶಿಲಾನ್ಯಾಸವನ್ನು ಕಕ್ವ ಬಾನೊಟ್ಟು ಬಳಿ ಜಿಪಂ ಸದಸ್ಯ ವಿನೋದ್ ಬೊಳ್ಳೂರು ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಪ್ರತಿ ಬೇಸಿಗೆಯಲ್ಲಿ ಕಕ್ವ,ಮಟ್ಟು, ಶಿಮಂತೂರು, ಮೈಲೊಟ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವವಿದ್ದು, ಯೋಜನೆಯಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು ಎಂದರು.
ತಾಪಂ ಸದಸ್ಯ ಶರತ್ ಕುಬೆವೂರು, ಪಿಡಿಒ ರವಿ, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ, ಗ್ರಾಪಂ ಮಾಜಿ ಸದಸ್ಯರಾದ ಮನೋಹರ ಕೋಟ್ಯಾನ್, ಹರೀಶ್ ಶೆಟ್ಟಿ ಶಿಮಂತೂರು, ಉದಯ ಅಮೀನ್, ಜಯ ಕುಮಾರ್, ಸಾಧು ಅಂಚನ್, ಕುಟ್ಟಿ ಪಂಬದ, ರತ್ನಾಕರ ಕೋಟ್ಯಾನ್, ವಿಶ್ವನಾಥ ಮಡಿವಾಳ, ವಿಶ್ವನಾಥ ಕೋಟ್ಯಾನ್, ಶೇಖರ ಪೂಜಾರಿ, ವಿನಯ ಕುಮಾರ್, ನರೇಶ್ ಕುಮಾರ್, ಕಿಶೋರ್ ಶೆಟ್ಟಿ ಶಿಮಂತೂರು, ರವೀಶ್ ಕಾಮತ್, ರಮೇಶ್ ಹೊಸಕೊಪ್ಪಲ, ಅಶೋಕ್ ಆಚಾರ್ಯ ಅಶೋಕ್ ಜನನಿ, ಗುತ್ತಿಗೆ ದಾರ ಸುಕೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಅತಿಕಾರಿಬೆಟ್ಟು ಗ್ರಾ ಪಂ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನೀರಿನ ಟ್ಯಾಂಕ್ ಅಪಾಯದಲ್ಲಿದ್ದು, ಕುಡಿಯುವ ನೀರಿನ ಅಭಾವ ಕಾಡುತ್ತಿತ್ತು. ಈ ಬಗ್ಗೆ ಅನೇಕ ಬಾರಿ ಪ್ರತಿ ಗ್ರಾಪಂ ಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕೂಡ ವರದಿ ಮಾಡಿತ್ತು.
Kshetra Samachara
04/10/2020 10:28 am