ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ : ಯು.ಪಿ.ಘಟನೆಗೆ ಕಾಂಗ್ರೆಸ್ ಆಕ್ರೋಶ ; ಶ್ರದ್ಧಾಂಜಲಿ ಸಭೆ

ಮುಲ್ಕಿ: ಉತ್ತರ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿ ಮನಿಷಾ ವಾಲ್ಮೀಕಿ ಸಾವಿಗೆ ನ್ಯಾಯ ಒದಗಿಸುವಂತೆ ಮೂಡುಬಿದಿರೆ ಬಳಿಯ ದರೆಗುಡ್ಡೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಸಭೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಹೆಣ್ಣುಮಕ್ಕಳಿಗೆ ಶ್ರೀರಾಮನ ನಾಡಿನಲ್ಲೇ ರಕ್ಷಣೆ ಇಲ್ಲವಾಗಿದೆ. ಇದು ಭಾರತಿಯರ ದೌರ್ಭಾಗ್ಯ, ಇಂಥ ಘಟನೆಯನ್ನು ನಾವು ಎಲ್ಲರೂ ಒಂದಾಗಿ ಪ್ರತಿಭಟಿಸಬೇಕು ಎಂದರು.

ದರೆಗುಡ್ದೆ ಮಾಜಿ ಪಂ. ಸದಸ್ಯರಾದ ಜಯ ಕುಮಾರ್ ಶೆಟ್ಟಿ , ಸುಭಾಷ್ ಚಂದ್ರ ಚೌಟ, ಮೆಲ್ವಿನ್ ಡಿಮೆಲ್ಲೊ, ಕಾಂಗ್ರೆಸ್‌ ಮುಖಂಡರಾದ ಶಿವಾನಂದ ಪಾಂಡ್ರು, ಸುಕುಮಾರ್ ಜೈನ್,ಪ್ರಭಾಕರ್, ಆಕಾಶ್ ಶೆಟ್ಟಿ, ಧರ್ಮೇಶ್ ಭಂಡಾರಿ, ಶಿವಾನಂದ,ಲಾರೆನ್ಸ್ ಲೋಬೊ, ಪ್ರಭಾವತಿ,ಸುನಿತಾ,ಸಂಜೀವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

04/10/2020 09:04 am

Cinque Terre

9.41 K

Cinque Terre

0

ಸಂಬಂಧಿತ ಸುದ್ದಿ