ಮಂಗಳೂರು: ಎಸ್‌ಡಿಪಿಐ ಕಲ್ಲಾಪು ಘಟಕದ ಕಚೇರಿ ಮತ್ತು ಮಾಹಿತಿ, ಸೇವಾ ಕೇಂದ್ರಕ್ಕೆ ಪಕ್ಷದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ ಚಾಲನೆ ನೀಡಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಸಮಿತಿ ಸದಸ್ಯ ರಫೀಕ್ ದಾರಿಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೋಡಿಜಾಲ್, ಪಿಎಫ್‌ಐ ವಲಯ ಅಧ್ಯಕ್ಷ ತಂಝೀಲ್ ಉಳ್ಳಾಲ, ಕೆ.ಸಿ.ರೋಡ್ ಕುರಾನಿಕ್ ಸ್ಟಡೀಸ್‌ನ ಪ್ರಾಧ್ಯಾಪಕ ಸುಲೈಮಾನ್, ಎಸ್‌ವೈಎಸ್ ಕಲ್ಲಾಪು ಶಾಖಾಧ್ಯಕ್ಷ ಮೊಯ್ದಿನ್, ಕಲ್ಲಾಪು ಎಂಎಫ್‌ಸಿ ಸ್ಪೋರ್ಟ್ಸ್ ಕ್ಲಬ್‌ನ ಸಲಹೆಗಾರ ಅಬ್ದುಲ್ ಹಮೀದ್, ಕಲ್ಲಾಪು ಉರ್ದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸದ್ದಾಮ್ ಕಲ್ಲಾಪು, ಪಿಎಫ್‌ಐ ಉಳ್ಳಾಲ ವಲಯಾಧ್ಯಕ್ಷ ಸಿದ್ದೀಕ್ ಯು.ಬಿ. ಮೊದಲಾದವರು ಉಪಸ್ಥಿತರಿದ್ದರು.
Kshetra Samachara
07/10/2020 10:39 pm