ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಕ್ರಮ ಗೋ ಸಾಗಾಟ ಹೆಚ್ಚಳ ಹಿನ್ನೆಲೆ; ಜಿಲ್ಲಾಡಳಿತಕ್ಕೆ ತರಾಟೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳತನ, ಅಕ್ರಮ ಗೋ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಪಟ್ಟವರು ಇನ್ನೂ ಕ್ರಮಕ್ಕೆ ಮುಂದಾಗದಿದ್ದಲ್ಲಿ ಬಜರಂಗ ದಳ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಕದ್ರಿಯಲ್ಲಿರುವ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು ಗೋ ಕಳ್ಳತನ, ಅಕ್ರಮ ಸಾಗಾಟ ಜಾಲ ವ್ಯವಸ್ಥಿತ ಗೋ ಮಾಫಿಯಾ ಆಗಿದೆ. ಇದರ ಹಿಂದೆ ಕಾಣದ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಗೋ ಕಳ್ಳತನ, ಅಕ್ರಮ ಸಾಗಾಟವನ್ನು ನಮ್ಮ ಕಾರ್ಯಕರ್ತರು ತಡೆಯುವ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಜಿಲ್ಲಾಡಳಿತವೇ ಅದಕ್ಕೆ ನೇರ ಹೊಣೆ ಎಂದು ಶರಣ್ ಪಂಪ್‌ವೆಲ್ ಅವರು ಜಿಲ್ಲಾಡಳಿತವನ್ನು ತರಾಟೆಗೆತ್ತಿ ಎಚ್ಚರಿಸಿದರು.

Edited By : Vijay Kumar
Kshetra Samachara

Kshetra Samachara

05/10/2020 11:35 pm

Cinque Terre

3.7 K

Cinque Terre

0

ಸಂಬಂಧಿತ ಸುದ್ದಿ