ಮಂಗಳೂರು: ಇಲ್ಲಿನ ಬಜಪೆಯ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿಪಿಐ) ದ ಗ್ರಾಮ ಸಮಿತಿ ವತಿಯಿಂದ ಕಿನ್ನಿಪದವು ರೋಯಲ್ ಹೌಸಿನಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಿತು.
ಬಜಪೆ ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಬಜಪೆ ಉದ್ಘಾಟಿಸಿದರು.
ಬಜಪೆ ಪಂಚಾಯಿತಿ ಹಾಗೂ ಆಸುಪಾಸಿನ 350 ರಷ್ಟು ನಿವಾಸಿಗಳು ಈ ಅಭಿಯಾನದ ಪ್ರಯೋಜನೆ ಪಡೆದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜಪೆ ವಲಯ ಅಧ್ಯಕ್ಷ ಹಸೈನಾರ್, ಜಿಲ್ಲಾ ಸಮಿತಿ ಸದಸ್ಯ ಇಸ್ಮಾಯಿಲ್ ಎಂಜಿನಿಯರ್,
ಎಸ್ ಡಿಪಿಐ ಕಾರ್ಯಕರ್ತರಾದ ರಫೀಕ್ ಶಾಂತಿಗುಡ್ದೆ, ಇರ್ಷಾದ್, ಮನ್ಸೂರ್, ಅನ್ವರ್, ಇಮ್ರಾನ್, ಪರ್ವೀಝ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/09/2020 12:34 pm