ಮಂಗಳೂರು : ಉಳ್ಳಾಲ ರಹ್ಮಾನಿಯ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಪೇಟೆ ಉಳ್ಳಾಲ ಜಂಟಿ ಸಹಭಾಗಿತ್ವದಲ್ಲಿ ಪೇಟೆ ಮಸೀದಿಯ ವಠಾರದಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಿತು.
ಪೇಟೆ ಮಸೀದಿ ಅಧ್ಯಕ್ಷ ಮೊಯ್ದೀನ್ ಹಾಜಿ ಉದ್ಘಾಟಿಸಿದರು.
ಪೇಟೆ ಮಸೀದಿ ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಮುಅಲ್ಲಿಂ ಹಾರಿಸ್ ಉಸ್ತಾದ್, ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ತೌಸೀಫ್ , ಕಾರ್ಯದರ್ಶಿ ಅಝೀಮ್, ಜೊತೆ ಕಾರ್ಯದರ್ಶಿ ಶರಾಫತ್, ಖಜಾಂಚಿ ಅಫ್ರಿದ್ ಹಾಗೂ ಸದಸ್ಯರು ಭಾಗವಹಿಸಿದ್ದರು.
ಹಲವು ನಾಗರಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
Kshetra Samachara
22/09/2020 01:01 pm