ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಆರ್‌ಪಿಎಲ್‌ನ ಇಂಧನದಲ್ಲಿ ಸಂಚರಿಸಲಿವೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ

ಮಂಗಳೂರು : ರಾಜ್ಯದಲ್ಲಿಯೇ ಏಕೈಕ ಹೈಡ್ರೋಕಾರ್ಬನ್‌ ಸಂಸ್ಕರಣಾಗಾರವಾದ ಎಂಆರ್‌ಪಿಎಲ್‌ನಲ್ಲಿ ಉತ್ಪಾದಿಸಲಾದ ಡೀಸೆಲ್‌ ಇನ್ನುಮುಂದೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಪೂರೈಕೆಯಾಗಲಿದೆ.

ಹೌದು... ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಪೂರೈಕೆಯಾಗಲಿದ್ದು,ಈ ಎಲ್ಲ ಬಸ್‌ಗಳಿಗೆ ಇಂಧನ ಸರಬರಾಜುದಾರರಾಗಿರುವ ಎಚ್‌ಪಿಸಿಎಲ್‌ ಈಗ ಮಂಗಳೂರು ಸಂಸ್ಕರಣಾಗಾರದಿಂದ ಡೀಸೆಲ್‌ ಪೂರೈಸಲಿದೆ.

ಎಂಆರ್‌ಪಿಎಲ್‌ನಿಂದ ಕೆಎಸ್‌ಆರ್‌ಟಿಸಿಗೆ ಮೊದಲ ಲೋಡ್‌ ಅನ್ನು ಇತ್ತೀಚೆಗೆ ರವಾನಿಸಲಾಗಿದೆ. ಪ್ರತೀ ತಿಂಗಳು 50 ಸಾವಿರ ಕಿಲೋ ಲೀಟರ್‌ ಡೀಸೆಲ್‌ ಸರಬರಾಜು ಮಾಡುವ ಒಪ್ಪಂದಕ್ಕೆ ಮುಂದಾಗಿದೆ.

ಎಂಆರ್‌ಪಿಎಲ್‌ನ ಮಾರ್ಕೆಟಿಂಗ್‌ ಜಿಜಿಎಂ ಸತ್ಯನಾರಾಯಣ ಎಚ್‌.ಸಿ. ಅವರು, “ಈ ಒಡಂಬಡಿಕೆಯು ಕಳೆದ ಹಣಕಾಸು ವರ್ಷದ ನಮ್ಮ ಮಾರಾಟಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಡೀಸೆಲ್‌ ನೇರ ಮಾರಾಟವನ್ನು ಕನಿಷ್ಠ 20 ಪಟ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಎಂಆರ್‌ಪಿಎಲ್‌ ತನ್ನ ಚಿಲ್ಲರೆ ಮಾರಾಟ ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಿಸುತ್ತಿದೆ. ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿ ಇದೆ’ ಎಂದು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/09/2020 08:08 pm

Cinque Terre

16.14 K

Cinque Terre

0

ಸಂಬಂಧಿತ ಸುದ್ದಿ