ಬಂಟ್ವಾಳ: ಕಳೆದ ಒಂದೂವರೆ ವರ್ಷದಿಂದ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಧಾಕೃಷ್ಣ. ಕೆ. (50) ಅವರು ಹೃದಯಾಘಾತದಿಂದ ಶನಿವಾರ ಮುಂಜಾನೆ ಬಿ.ಸಿ.ರೋಡಿನಲ್ಲಿ ನಿಧನ ಹೊಂದಿದರು.
ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗುವನ್ನು ಅವರು ಅಗಲಿದ್ದಾರೆ. ಮೂಲತಃ ಶಿರ್ತಾಡಿಯವರಾಗಿದ್ದ ಅವರು ಸಕಲೇಶಪುರದಲ್ಲಿ ಕರ್ತವ್ಯ ಸಲ್ಲಿಸಿ, ಬಳಿಕ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಬಳಿಕ ಹಾಸನದಿಂದ ಸಾಮಾಜಿಕ ಭದ್ರತೆ ವಿಭಾಗದ ಶಿರಸ್ತೇದಾರ್ ಆಗಿ ಕರ್ತವ್ಯಕ್ಕೆ ಭಡ್ತಿ ಹೊಂದಿ ಬಂಟ್ವಾಳ ತಾಲೂಕು ಕಚೇರಿಗೆ ಕಳೆದ ಒಂದೂವರೆ ವರ್ಷಗಳ ಹಿಂದೆ ಆಗಮಿಸಿದ್ದರು. ಅವರು ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಆಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃದುಭಾಷಿಯಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರ ಅಂತಿಮ ದರ್ಶನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಹಾಯಕ ಕಮೀಷನರ್ ಮದನ್ ಮೋಹನ್, ತಹಸೀಲ್ದಾರ್ ರಶ್ಮಿ ಎಸ್.ಆರ್. ಸಹಿತ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗ, ಸರ್ಕಾರಿ ನೌಕರರ ಸಂಘದ ಸದಸ್ಯರು ಅಂತಿಮ ದರ್ಶನ ಪಡೆದರು.
Kshetra Samachara
19/09/2020 11:24 am