ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ.ಪಾರ್ವತಿ ಅಪ್ಪಯ್ಯ ಸದಸ್ಯತ್ವ ಹಿಂಪಡೆಯಿರಿ: ರಾಜ್ಯಪಾಲರಿಗೆ ಅನ್ವಿತ್ ಕಟೀಲ್ ಒತ್ತಾಯ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯರಾಗಿ ಸರ್ಕಾರ ನಾಮ ನಿರ್ದೇಶನ ಮಾಡಿರುವ ಡಾ.ಪಾರ್ವತಿ ಅಪ್ಪಯ್ಯ ಅವರ ಮೇಲೆ ಕ್ರಿಮಿನಲ್ ಪ್ರಕರಣವಿದೆ. ಹೀಗಾಗಿ ತಕ್ಷಣವೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಇಂತಹ ಸದಸ್ಯರ ನಾಮನಿರ್ದೇಶನದ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಎನ್‌ಎಸ್‌ಯುಐ, ಆರ್‌ಟಿಐ-ಐಟಿ ಸೆಲ್ ರಾಷ್ಟ್ರೀಯ ಸಂಚಾಲಕ ಅನ್ವಿತ್ ಕಟೀಲ್ ಪತ್ರ ಮುಖೇನ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

ಡಾ.ಪಾರ್ವತಿ ಅಪ್ಪಯ್ಯ ಅವರು ಮಂಗಳೂರು ವಿವಿಯ ನಿವೃತ್ತ ಉದ್ಯೋಗಿಯೂ ಆಗಿದ್ದು, ವಿಶ್ವ ವಿದ್ಯಾಲಯದಿಂದ ಪಿಂಚಣಿಯನ್ನೂ ಪಡೆಯುತ್ತಿದ್ದಾರೆ. ವಿಶ್ವ ವಿದ್ಯಾಲಯದ ಕಾಯ್ದೆ ಪ್ರಕಾರ ಸಿಂಡಿಕೇಟ್ ಸದಸ್ಯರಾಗುವವರು ವಿಶ್ವವಿದ್ಯಾಲಯದಿಂದ ನೇರವಾಗಿ ಇಲ್ಲವೇ ಬೇರೆ ಯಾವುದೇ ರೀತಿಯಲ್ಲಿ ಫಲಾನುಭವಿ ಆಗಿರಬಾರದು ಎನ್ನುವ ನಿಯಮವಿದೆ. ಆದರೆ ಇಲ್ಲಿ ಅದೆಲ್ಲವನ್ನೂ ಗಾಳಿಗೆ ತೂರಿ ಸಿಂಡಿಕೇಟ್ ಸದಸ್ಯರನ್ನ ನಾಮನಿರ್ದೇಶನ ಮಾಡಲಾಗಿದೆ. ಆದ್ದರಿಂದ ರಾಜ್ಯಪಾಲರು ತಕ್ಷಣ ಈ ಆದೇಶವನ್ನ ಹಿಂಪಡೆದು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಎನ್‌ಎಸ್‌ಯುಐ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

24/11/2020 11:12 pm

Cinque Terre

5.13 K

Cinque Terre

1

ಸಂಬಂಧಿತ ಸುದ್ದಿ