ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಂಟ್ ಮೇರೀಸ್ ದ್ವೀಪ ಅವ್ಯವಸ್ಥೆಗೆ ಆಕ್ರೋಶ

ಮುಲ್ಕಿ: ಉಡುಪಿ ಜಿಲ್ಲೆಯ ಮಲ್ಪೆ ಸೈಂಟ್ ಮೇರೀಸ್ ದ್ವೀಪ ಅವ್ಯವಸ್ಥೆಗಳ ಆಗರವಾಗಿದ್ದು, ಪ್ರವಾಸಿಗರು ಎಚ್ಚರದ ವಹಿಸಬೇಕಾಗಿದೆ ಎಂದು ಮುಲ್ಕಿ ಸಮೀಪದ ಶಿಮಂತೂರಿನ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಹೇಳಿದ್ದಾರೆ.

ಸೈಂಟ್ ಮೇರೀಸ್ ದ್ವೀಪದಲ್ಲಿ ಸ್ನಾನ ಮಾಡುವ ಪ್ರವಾಸಿಗರಿಗೆ ಜೆಲ್ ಫಿಶ್ ಕಚ್ಚುತ್ತಿದ್ದು, ತುಂಬಾ ನೋವು ಅನುಭವಿಸಬೇಕಾಗುತ್ತದೆ. ಕಳೆದ ದಿನದ ಹಿಂದೆ ಸುಧೀರ್ ಶೆಟ್ಟಿ ಶಿಮಂತೂರ್ ಕುಟುಂಬ ಮಲ್ಪೆ ಸೈಂಟ್‌ ಮೇರೀಸ್ ದ್ವೀಪಕ್ಕೆ ತೆರಳಿ ಸ್ನಾನಕ್ಕೆ ನೀರಿಗೆ ಇಳಿದಿದ್ದರು. ಅಲ್ಲಿ ಅವರ ಪತ್ನಿಗೆ ಜೆಲ್ ಫಿಶ್ ಕಚ್ಚಿದ್ದು ತುಂಬಾ ನೋವು ಅನುಭವಿದಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿ ಚಿಕೆತ್ಸೆ ತೆಗೆದುಕೊಂಡಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ದ್ವೀಪದಿಂದ ಬೇಗನೆ ಹಿಂದೆ ಬರಲೂ ಆಗುವುದಿಲ್ಲ. ಅಲ್ಲಿ ಸಮಯ ಸಮಯಕ್ಕೆ ದೋಣಿಯ ವ್ಯವಸ್ಥೆ ಇರುವುದಿಲ್ಲ. ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.

ಮಕ್ಕಳು ತಡೆದುಕೊಳ್ಳಲು ಆಗದಷ್ಟು ನೋವು ಇರಬಹುದು. ಕೂಡಲೇ ದೀಪದ ಅವ್ಯವಸ್ಥೆ ಬಗ್ಗೆ ಪ್ರವಾಸೋದ್ಯಮ ಇಲಾಖೆ ಎಚ್ಚರ ವಹಿಸಿ ಪ್ರವಾಸಿಗರಿಗೆ ಆಗುವ ತೊಂದರೆ ಬಗ್ಗೆ ಗಮನಹರಿಸಬೇಕೆಂದು ಸಂಬಂಧಪಟ್ಟ ಇಲಾಖೆಯನ್ನು ಸುಧೀರ್ ಶೆಟ್ಟಿ ಒತ್ತಾಯಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

24/11/2020 10:00 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ