ಬಂಟ್ವಾಳ: ಭಾನುವಾರ ಬೆಳಗ್ಗೆ 4 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ 19ನೇ ವರ್ಷದ ವಿಶ್ವರೂಪ ದರ್ಶನ ಸೇವೆ ನಡೆಯಿತು.
ಶ್ರೀ ಶಾರ್ವರಿ ನಾಮ ಸಂವತ್ಸರದ ಕಾರ್ತಿಕ ಶುದ್ಧ ಅಷ್ಟಮಿಯ ಹಿನ್ನೆಲೆಯಲ್ಲಿ ದೀಪಜ್ಯೋತಿ ಬೆಳಗಿಸಿ ಕಾಕಡಾರತಿ, ಜಾಗರಪೂಜೆ, ವಿಶೇಷಾಲಂಕೃತ ಶ್ರೀ ದೇವರ ವಿಶ್ವರೂಪ ದರ್ಶನ ಭಾಗ್ಯ, ಪ್ರಸಾದ ವಿತರಣೆ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ನಡೆಯಿತು.
Kshetra Samachara
22/11/2020 09:02 am