ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೇಮಕ ವಿಳಂಬಕ್ಕೆ ಆಕ್ರೋಶ

ಮುಲ್ಕಿ: ಮುಜರಾಯಿ ಇಲಾಖೆಗೆ ಸೇರಿದ ಇತಿಹಾಸ ಪ್ರಸಿದ್ಧ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಸರಕಾರ ವಿಳಂಬ ಮಾಡುತ್ತಿರುವ ಬಗ್ಗೆ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲೆಯಾದ್ಯಂತ ಹಲವು ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿಗಳು ಈಗಾಗಲೇ ನೇಮಕಗೊಂಡಿದ್ದು, ಕಳೆದ ಕೆಲ ತಿಂಗಳಿನಿಂದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇಮಕ ಇನ್ನೂ ಆಗಿಲ್ಲ.

ದೇವಳದಲ್ಲಿ ಕಳೆದ ಕೆಲ ತಿಂಗಳಿನಿಂದ ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಎರಡು ಬಣಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಕಲ್ಲಡ್ಕ ಹೈಕಮಾಂಡ್ ವರೆಗೂ ನೇಮಕಕ್ಕೆ ವಶೀಲಿಬಾಜಿ ನಡೆದಿದೆ ಎನ್ನಲಾಗಿದೆ.

ಈ ನಡುವೆ ದೇವಳದಲ್ಲಿ ಪ್ರತಿ ಸಂಕ್ರಾಂತಿಯಂದು ಸೇವಾ ಅನ್ನ ಸಂತರ್ಪಣೆ ನಡೆಯುತ್ತಿದ್ದು ಕೊರೊನಾ ಬಳಿಕ ಸರಕಾರದ ಸೂಚನೆಯಂತೆ ಸ್ಥಗಿತಗೊಂಡಿರುವ ಅನ್ನ ಸಂತರ್ಪಣೆ ಇದುವರೆಗೂ ಆರಂಭಗೊಂಡಿಲ್ಲ.

ಕಟೀಲು ಸಹಿತ ಪ್ರಸಿದ್ಧ ದೇವಳಗಳಲ್ಲಿ ಕೊರೊನಾ ಮುಂಜಾಗರೂಕತೆ ವಹಿಸಿ ಪ್ರಕಾರದ ನಿಯಮ ಪಾಲಿಸಿಕೊಂಡು ಈಗಾಗಲೇ ಅನ್ನ ಸಂತರ್ಪಣೆ ಪ್ರಾರಂಭಿಸಲಾಗಿದೆ.

ಆದರೆ, ಮುಜರಾಯಿ ಇಲಾಖೆಗೆ ಸೇರಿದ ಸಣ್ಣಮಟ್ಟಿನ ದೇವಸ್ಥಾನಗಳಲ್ಲಿ ತಾರತಮ್ಯ ಯಾಕೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

12/11/2020 06:41 pm

Cinque Terre

13.39 K

Cinque Terre

0

ಸಂಬಂಧಿತ ಸುದ್ದಿ