ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ; ಎಬಿವಿಪಿ ಆಕ್ರೋಶ

ಮಂಗಳೂರು: ರಿಪಬ್ಲಿಕ್ ಟಿ.ವಿ. ನಿರೂಪಕ ಹಾಗೂ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸುಬ್ರಹ್ಮಣ್ಯ ಘಟಕದ ವತಿಯಿಂದ ಇಲ್ಲಿನ ಶ್ರೀ ನವದುರ್ಗ ದೇವಸ್ಥಾನದ ವಠಾರದಲ್ಲಿ ಪ್ರತಿಭಟನೆ ನಡೆಯಿತು.

ಅರ್ನಬ್ ಗೋಸ್ವಾಮಿಯವರ ಬಂಧನ, ಮೂಲಭೂತ ಸ್ವಾತಂತ್ರ್ಯದ ಮೇಲಿನ ತುರ್ತು ಪರಿಸ್ಥಿತಿ ಏರಿಕೆ ಎಂದು ಸಂಘಟನೆ ಖಂಡಿಸಿತು. ಸರಕಾರ ಮಧ್ಯ ಪ್ರವೇಶಿಸಿ ಗೋಸ್ವಾಮಿಯವರನ್ನು ಬಂಧ ಮುಕ್ತಗೊಳಿಸಬೇಕೆಂದು ಆಗ್ರಹಿಸಿ, ಬಳಿಕ ಕಡಬ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.

ಈ ಸಂದರ್ಭ ಎಬಿವಿಪಿ ನಗರ ಕಾರ್ಯದರ್ಶಿ ಇಲೈ ಅರಸ್, ಹಿತೇಶ್, ರಕ್ಷಿತ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Edited By : Vijay Kumar
Kshetra Samachara

Kshetra Samachara

08/11/2020 04:43 pm

Cinque Terre

4.11 K

Cinque Terre

0

ಸಂಬಂಧಿತ ಸುದ್ದಿ