ಮುಲ್ಕಿ: ಮೇರುನಟ ಸಾಹಸ ಸಿಂಹ ವಿಷ್ಣುವರ್ಧನ್ ಬಡವರ ಪಾಲಿನ ಅನ್ನದಾತ ಹಾಗೂ ಚಿತ್ರರಂಗದ ಅಜಾತ ಶತ್ರು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಮುಲ್ಕಿಯ ಕೆಎಸ್ ರಾವ್ ನಗರದ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಯ್ಯ ಹಿರೇಮಠ ಹೇಳಿದರು.
ಮುಲ್ಕಿಯ ಕೆಎಸ್ ರಾವ್ ನಗರದ ಲಿಂಗಪ್ಪಯ್ಯಕಾಡು ಭಾಗ್ಯವಂತಿ ದೇವಿ ದೇವಸ್ಥಾನದ ವೇದಿಕೆಯಲ್ಲಿ ಸಂಘದ ವತಿಯಿಂದ ಅಭಿನಯ ಭಾರ್ಗವ, ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ ಮಾತನಾಡಿದರು. ಮುಲ್ಕಿ ನ.ಪಂ. ಸದಸ್ಯರಾದ ಮಂಜುನಾಥ ಕಂಬಾರ,ಸಂದೀಪ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಸಂತೋಷ್ ದೇಶುಣಿಗಿ, ಮಲ್ಲಿಕಾರ್ಜುನ ಆರ್ ಕೆ. ಹನುಮಂತ ಗಂಗನ ಬೂದಿಹಾಳ, ಮಂಜುನಾಥ ಡಿ. ಮಾಸ್ಟರ್, ಪುಟ್ಟಯ್ಯ ಸ್ವಾಮಿ,ವಿಷ್ಣು ಅಭಿಮಾನಿಗಳ ಸಂಘದ ಜೂನಿಯರ್ ವಿಷ್ಣುವರ್ಧನ್ ಕೆ.ಎಚ್., ಕೀರ್ತನ, ಉಪಾಧ್ಯಕ್ಷರಾದ ವಿಷ್ಣು ಪಾಟೀಲ್,ಪದಾಧಿಕಾರಿಗಳಾದ ಪುಂಡಲೀಕ ಬೂದಿಹಾಳ,ನಬೀಲಾಲ್ ಎಂ.ಎಸ್,ವೀರೇಶ್ ರೆಡ್ಡಿ,ಕೃಷ್ಣ ಪವಾರ್,ಇಬ್ರಾಹಿಂ ತಾಳಿಕೋಟೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿರುವ ವಿಷ್ಣು ವನಭೋಜನ ಅವರಿಗೆ ಸಹಾಯಧನ ವಿತರಿಸಲಾಯಿತು. ವೀರಯ್ಯ ವಿ. ಹಿರೇಮಠ ಸ್ವಾಗತಿಸಿದರು. ಮಂಜುನಾಥ ಡಿ. ಮಾಸ್ಟರ್ ನಿರೂಪಿಸಿದರು. ಬಳಿಕ
ವಿಷ್ಣುವರ್ಧನ್ ಅಭಿನಯದ ಗೀತೆಗಳನ್ನು ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Kshetra Samachara
19/09/2020 10:35 am