ಬಂಟ್ವಾಳ: ಕೆಲ ಅಹಿತಕರ ಘಟನೆಗಳು ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ಮೂಡಿಸಲು ಹಾಗೂ ಮುಂಜಾಗರೂಕತಾ ಕ್ರಮವಾಗಿ ಬಂಟ್ವಾಳ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ.
ಬಂಟ್ವಾಳ ವೃತ್ತಕ್ಕೆ ಸಂಬಂಧಿಸಿ ಬಂಟ್ವಾಳ ನಗರ, ಗ್ರಾಮಾಂತರ, ಪುಂಜಾಲಕಟ್ಟೆ, ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗ, ಆಯಕಟ್ಟಿನ ಜಾಗ, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ವಾಹನ ಸಂಚಾರ ಕುರಿತು ನಿಗಾ ವಹಿಸುತ್ತಿದ್ದಾರೆ. ಒಟ್ಟು 8 ಕಡೆ ಚೆಕ್ ಪಾಯಿಂಟ್ ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿ.ಸಿ.ರೋಡು, ಕೈಕಂಬ, ಫರಂಗಿಪೇಟೆ, ಮೆಲ್ಕಾರ್ , ಕಲ್ಲಡ್ಕ ಹಾಗೂ ಬಂಟ್ವಾಳ ಪೇಟೆಗಳಲ್ಲಿ ರಾತ್ರಿ 10ರ ಬಳಿಕ ಅನಾವಶ್ಯಕವಾಗಿ ಪೇಟೆಯಲ್ಲಿ ತಿರುಗಾಡುವವರ ಕುರಿತು ನಿಗಾ ವಹಿಸಲಾಗುತ್ತಿದೆ.
Kshetra Samachara
02/11/2020 08:35 pm