ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಬಂಟ್ಟಾಳ ತಾಲೂಕು ಶಾಖೆ ಅಧ್ಯಕ್ಷರಾಗಿ ಸಂಜೀವ

ಬಂಟ್ವಾಳ: ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮತ್ತು ಕಾರ್ಯದರ್ಶಿ ಚಂದ್ರಶೇಖರ.ಯು ನೇತೃತ್ವದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಸಂಜೀವ ಹೆಗ್ಡೆಕೋಡಿ, ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಬಿ.ಕೆ. ಪ್ರಸಾದ್ ಅನಂತಾಡಿ, ಗೌರವಾಧ್ಯಕ್ಷರಾಗಿ ಗಣೇಶ ಸೀಗೆಬಲ್ಲೆ, ಉಪಾಧ್ಯಕ್ಷ ವಸಂತ ಕುಕ್ಕೆಬೆಟ್ಟು, ಜತೆಕಾರ್ಯದರ್ಶಿ ರವಿ ಮೂಡಂಬೈಲು, ಗೌರವ ಸಲಹೆಗಾರರಾಗಿ ಸುಂದರ ನಾಯ್ಕ ಸಾರಡ್ಕ ಮತ್ತು ಸಂಚಾಲಕರಾಗಿ ಪ್ರಕಾಶ್ ಎಲುವಡ್ಕ ಪೆರುವಾಯಿ ಅವರನ್ನು ಆಯ್ಕೆ ಮಾಡಲಾಯಿತು.

Edited By : Vijay Kumar
Kshetra Samachara

Kshetra Samachara

20/10/2020 09:32 pm

Cinque Terre

5.31 K

Cinque Terre

0

ಸಂಬಂಧಿತ ಸುದ್ದಿ