ಮಂಗಳೂರು: ಪಣಂಬೂರು ಬೀಚ್ ನಲ್ಲಿನೀರು ಪಾಲಾಗುತ್ತಿದ್ದ ಇಬ್ಬರನ್ನು ಬೀಚ್ ನ ಲೈಫ್ ಗಾರ್ಡ್ ಗಳು ರಕ್ಷಿಸಿದ್ದಾರೆ.
ಬಿಜಾಪುರ ಮೂಲದ ಶರಣಪ್ಪ (35) ಮತ್ತು ಜೋಕಟ್ಟೆ ನಿವಾಸಿ ನಾಗರಾಜ ಎಚ್.ಎಸ್. (18) ರಕ್ಷಿಸಲ್ಪಟ್ಟವರು.
ಇವರ ಸಹಿತ 10 ಮಂದಿ ಸ್ನೇಹಿತರು ಇಂದು ಪಣಂಬೂರು ಬೀಚ್ ಗೆ ಸುತ್ತಾಡಲು ಬಂದಿದ್ದರು.
ಈ ವೇಳೆ ಕಡಲಿಗಿಳಿದಿದ್ದ ಶರಣಪ್ಪ ಮತ್ತು ನಾಗರಾಜ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಪಣಂಬೂರು ಬೀಚ್ ನ ಲೈಫ್ ಗಾರ್ಡ್ ಗಳು ಅವರನ್ನು ರಕ್ಷಿಸಿ ದಡ ಸೇರಿಸಿ, ಜೀವ ಉಳಿಸಿದ್ದಾರೆ.
Kshetra Samachara
18/10/2020 06:18 pm