ಮಂಗಳೂರು: ಶನಿವಾರ ಅಸ್ತಮಿಸಿದ ಸಂಜೆ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮುಸ್ಲಿಮರ ಪವಿತ್ರ ಮಾಸ ರಬೀವುಲ್ ಅವ್ವಲ್ ಅ.18ರಿಂದ ಪ್ರಾರಂಭವಾಗಲಿದೆ.
ಅ.18 ರಂದು ರಬೀವುಲ್ ಅವ್ವಲ್ ಚಾಂದ್ 1 ಆಗಿರುವುದರಿಂದ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಮಿಲಾದುನ್ನಬಿಯು ಅ.29ರಂದು ಆಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಕ ಅಹ್ಮದ್ ಅಲ್ ಅಝ್ಹರಿ ಹಾಗೂ ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
17/10/2020 11:09 pm