ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಕರಾವಳಿ 3 ಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 201 ಕೋಟಿ ವೆಚ್ಚದಲ್ಲಿ ಡಿಪಿಆರ್"

ಮುಲ್ಕಿ: ಮಂಗಳೂರು ಉತ್ತರ ಕ್ಷೇತ್ರದ 13 ಗ್ರಾಪಂ ಹಾಗೂ ಮೂಡಬಿದ್ರೆ, ಬಂಟ್ವಾಳದ ಕೆಲವು ಗ್ರಾಮಗಳನ್ನು ಒಳಗೊಂಡಂತೆ "ಜಲಜೀವನ್ ಮಿಷನ್" ಯೋಜನೆಯಡಿ ಗುರುಪುರ ಹಾಗೂ ನೇತ್ರಾವತಿ ನದಿಯಲ್ಲಿರುವ ಅಣೆಕಟ್ಟುಗಳಿಂದ ವರ್ಷಪೂರ್ತಿ ಸಮಸ್ಯೆಯಾಗದಂತೆ ಕುಡಿಯುವ ನೀರು ಅಗತ್ಯವಿರುವ ಗ್ರಾಮಗಳಿಗೆ ಪೂರೈಸಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ 201 ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಡಿಪಿಆರ್ ರೂಪಿಸಿ ಕಾಮಗಾರಿ ಆರಂಭಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಭಾಗದ ಜನತೆಗೆ ಮುಟ್ಟಿಸಲು ಬೇಕಾದ ಕ್ರಮಗಳ ಕುರಿತು ನಡೆದ ವಿಶೇಷ ಸಭೆಯಲ್ಲಿ ಆದೇಶ ನೀಡಿದರು.

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮಾಹಿತಿ ನೀಡಿ, ಗ್ರಾಮೀಣ ಭಾಗದಲ್ಲಿ ಹಲವೆಡೆ ಬೋರ್ ವೆಲ್, ಮನೆ ಮನೆಗೆ ನಳ್ಳಿ ಮೂಲಕ ನಿರಂತರ ನೀರು ಪೂರೈಕೆಗೆ ನೀರಿನ ಒರತೆಯಿಲ್ಲದೆ ಸಮಸ್ಯೆಯಾಗುತ್ತದೆ.

ಈ ಸಂದರ್ಭ ನೀರು ಪೂರೈಸಲು ಜಲಜೀವನ ಮಿಷನ್ ಮೂಲಕ ಈ ಹಿಂದೆ ಇದ್ದ ಬಹುಗ್ರಾಮ ನೀರು ಪೂರೈಕೆಯಂತೆ ಅಣೆಕಟ್ಟುಗಳಿಂದ ಕುಡಿಯುವ ನೀರು ಪೂರೈಕೆಗೆ ಜಲಜೀವನ್ ಮಿಷನ್ ನಲ್ಲೂ ಅವಕಾಶ ನೀಡಬೇಕು. ಪೈಪ್ ಲೈನ್, ಪಂಪ್ ಅಳವಡಿಕೆ, ನೀರು ಶುದ್ಧೀಕರಣ ಘಟಕ ಸಹಿತ ವಿವಿಧ ಸೌಲಭ್ಯಕ್ಕೆಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಮನವಿ ಮಾಡಿದರು.

ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಸಚಿವರು ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಇಲಾಖೆ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಆತಿಕ್, ಮುಖ್ಯ ಎಂಜಿನಿಯರ್ ಹೊಳೆಯಾಚೆ, ಕುಡಿಯುವ ನೀರಿನ ನಿರ್ವಹಣೆ ಮುಖ್ಯ ಎಂಜಿನಿಯರ್ ನರೇಂದ್ರ ಬಾಬು ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/10/2020 10:25 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ