ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಲಾತ್ಕಾರದ ಸಾಲ ವಸೂಲಿ; ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

ಬಂಟ್ವಾಳ: ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ, ಸಿ.ಐ.ಟಿ.ಯು., ಜನವಾದಿ ಮಹಿಳಾ ಸಂಘಟನೆ ವತಿಯಿಂದ ಖಾಸಗಿ ಫೈನಾನ್ಸ್ ಗಳು ಬಲಾತ್ಕಾರವಾಗಿ ಸಾಲ ವಸೂಲಿ ಮತ್ತು ಕಿರುಕುಳ ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಬುಧವಾರ ನಡೆಯಿತು.

ಸಮಿತಿ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಪ್ರಮುಖರಾದ ರಾಮಣ್ಣ ವಿಟ್ಲ, ಜಯಂತಿ ಶೆಟ್ಟಿ, ಶೋಭಾ ಕೊಯ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ, ಶೇಖರ ಲಾಯ್ಲ, ಮಹಮ್ಮದ್ ಅಲ್ತಾಫ್ ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಹಲವು ಖಾಸಗಿ ಫೈನಾನ್ಸ್ ಗಳು ಹಳ್ಳಿಯ ಮನೆ- ಮನೆಗೆ ತೆರಳಿ ಬಡ ಮಹಿಳೆಯರನ್ನು ಗುರಿಯಾಗಿರಿಸಿ ದುಬಾರಿ ಬಡ್ಡಿಯ ಸಾಲ ನೀಡಿ ಸುಲಿಗೆ ಮಾಡುತ್ತಾರೆ ಎಂದು ಆರೋಪಿಸಿದರು. ಮೈಕ್ರೋ ಫೈನಾನ್ಸ್ ಗಳು ಹಾಗೂ ಖಾಸಗಿ ಫೈನಾನ್ಸ್ ಗಳು ಕಾನೂನುಬಾಹಿರವಾಗಿ ನೀಡಿದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ದೌರ್ಜನ್ಯ ಎಸಗುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆಗೆ ಬಂದು ಸಾಲ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ಸಾಲ ನೀಡಬೇಕು, ಸಾಲ ವಸೂಲಾತಿ ವ್ಯಕ್ತಿಗಳಿಂದ ರಕ್ಷಣೆ ನೀಡಬೇಕು ಎಂದು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

Edited By : Vijay Kumar
Kshetra Samachara

Kshetra Samachara

20/01/2021 04:13 pm

Cinque Terre

4.08 K

Cinque Terre

2

ಸಂಬಂಧಿತ ಸುದ್ದಿ