ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ವೇಳೆ ಎಸ್ ಡಿ ಪಿ ಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 4 ಮೊಬೈಲ್ಗಳನ್ನು ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ದ.ಕ ಜಿಲ್ಲಾ ಎಸ್ ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣದಾಖಲಿಸಿಕೊಂಡಿರುವ ಪೊಲೀಸರು, ಘೋಷಣೆಗಳನ್ನುಕೂಗುತ್ತಿದ್ದರೆನ್ನಲಾಗುತ್ತಿದ್ದ ವೇಳೆ ವೀಡಿಯೊ ರೆಕಾರ್ಡ್ ಮಾಡಿರುವ ನಾಲ್ಕು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ.
ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ಬೇರೆ - ಬೇರೆ ವಿಡಿಯೋಗಳು ದೊರೆತಿವೆ ಎಂದು ಆ ಅವರು ಮಾಹಿತಿ ನೀಡಿದ್ವಿದಾರೆ.
ಪ್ರಕರಣನ ಸಂಬಂಧ ಸುಮಾರು 17 ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
Kshetra Samachara
02/01/2021 01:11 pm