ಮಂಗಳೂರು: ಮಂಗಳುರು ಮಹಾನಗರ ಪಾಲಿಕೆ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಬಾಕಿ ಇರುವವರು ಸೆಪ್ಟಂಬರ್ ಅಂತ್ಯದೊಳಗೆ ಪಾವತಿಸಬೇಕು. ಆ ಬಳಿಕ ದಂಡ ಸಹಿತ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ತೆರಿಗೆ ಬಾಕಿಯಿರುವವರನ್ನು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊರೋನ ಹಿನ್ನೆಲೆಯಲ್ಲಿ ಜುಲೈ ವರೆಗೆ ದಂಡ ರಹಿತ ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಲಾಗಿತ್ತಾದರೂ ಬಳಿಕ ಅದನ್ನು ಸೆಪ್ಟಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ತೆರಿಗೆ ಕಟ್ಟಲು ಬಾಕಿ ಇರುವವರು ಮತ್ತು ನೀರಿನ ಬಿಲ್ ಪಾವತಿಸಲು ಬಾಕಿ ಇರುವವರು ಸೆಪ್ಟಂಬರ್ ಅಂತ್ಯದ ಒಳಗೆ ಪಾವತಿಸಬೇಕು. ಅಕ್ಟೋಬರ್‌ನಲ್ಲಿ ಪಾವತಿಸುವುದಾದಲ್ಲಿ ದಂಡ ಸಹಿತ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಶೇ. 23ರಷ್ಟು ಮಾತ್ರವೇ ಆಸ್ತಿ ತೆರಿಗೆ ಪಾವತಿಯಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
Kshetra Samachara
24/09/2020 08:49 pm