ಬಂಟ್ವಾಳ: ಬಂಟ್ವಾಳ ತಾಲೂಕಿನ ಲೊರೆಟ್ಟೊ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ 400 ಕೆ.ವಿ. ಉಡುಪಿ- ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ಆತಂಕಿತ ಸಂತ್ರಸ್ತರ ಹೋರಾಟ ಸಮಿತಿ ಆಶ್ರಯದಲ್ಲಿ ಆತಂಕಿತ ಸಂತ್ರಸ್ತರ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸಂಯೋಜಕಿ ವಿದ್ಯಾ ದಿನಕರ್, ಯೋಜನೆ ಅನುಷ್ಠಾನವಾದಲ್ಲಿ ಜಿಲ್ಲೆಯ ಅರಣ್ಯ ಸಂಪತ್ತು, ಕೃಷಿ, ಜಲ ಸಂಪನ್ಮೂಲ ಹಾಗೂ ಜನಜೀವನದ ಮೇಲೆ ಅಪಾರ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದ್ದು, ಇದನ್ನು ತಡೆದು ನಮ್ಮ ಬದುಕಿನ ರಕ್ಷಣೆಯ ಹೋರಾಟದಲ್ಲಿ ಆತಂಕಿತ ಸಂತ್ರಸ್ತರ ಜೊತೆಗೆ ನಾಗರಿಕರೂ ಪಾಲ್ಗೊಳ್ಳಬೇಕಾದ ಅಗತ್ಯವಿದೆ ಎಂದರು.
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಮೊದಲ ಹಂತದ ಹೋರಾಟವನ್ನು ನಾವು ಮಾಡಿದ್ದು, ಅನಧಿಕೃತ ಗಡಿಗುರುತುಗಳನ್ನು ತೆರವುಗೊಳಿಸಿ, ನಮ್ಮ ಭೂಮಿ, ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯವುಳ್ಳ ಬೋರ್ಡುಗಳನ್ನು ಹಾಕಲಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ಎಲ್ಲ ಗ್ರಾಮಗಳಲ್ಲಿ ಹೋರಾಟ ವಿಸ್ತರಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ರೈತಸಂಘ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ವಹಿಸಿದ್ದರು. ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಹೋರಾಟ ಸಮಿತಿಯ ರೋಯ್ ಕಾರ್ಲೊ ಸಹಿತ ವಿವಿಧ ಸಮಿತಿಗಳ ಪದಾಧಿಕಾರಿಗಳು, ರೈತ ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.
Kshetra Samachara
08/02/2021 04:11 pm