ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಸಮೀಪ ತಿರುವು ರಸ್ತೆ ಭಾಗದಲ್ಲಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಲಾಗಿದ್ದ ಮೋರಿಯ ಒಂದು ಬದಿ ಕುಸಿತಕ್ಕೊಳಗಾಗಿದೆ. ಇದರಿಂದ ಅಪಾಯ ಎದುರಾಗಿದೆ.
ಕಮ್ಮಾಡಿಯಲ್ಲಿ ತಿರುವು ರಸ್ತೆಯಲ್ಲಿನ ಮೋರಿ ಹಳೆಯದಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ವೇಳೆ ಹಳೆಯ ಮೋರಿಯನ್ನು ಹೊಸದಾಗಿ ನಿರ್ಮಿಸದೇ ಯಥಾವತ್ತಾಗಿ ಬಿಡಲಾಗಿದೆ. ಹೀಗಾಗಿ ತಡೆಗೋಡೆಗಳು ಕುಸಿದು ಬಿದ್ದಿದೆ.
ಇನ್ನು ಇದೇ ಮಾರ್ಗವಾಗಿ ಭಾರೀ ವಾಹನಗಳು ಸಂಚರಿಸುವಾಗ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಸಂಪ್ಯ ಪೊಲೀಸರು ಸದ್ಯ ಈ ಜಾಗದಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಇದು ಹೆದ್ದಾರಿ ಪ್ರಾಧಿಕಾರದ ವೈಫಲ್ಯ ಎಂದು ಆರೋಪಿಸಿರುವ ಸ್ಥಳೀಯರು, ಇಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
22/01/2021 04:13 pm