ಮುಲ್ಕಿ:ಮಂಗಳೂರು ಮಹಾನಗರ ಪಾಲಿಕೆಯ 7ನೇ ಇಡ್ಯಾ ವಾರ್ಡ್ ನಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನಾಲ್ಕು ಕಾಂಕ್ರಟೀಕರಣಗೊಂಡ ರಸ್ತೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಈ ವಾರ್ಡ್ ನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.
ಎಲ್ಲಾ ಕಡೆ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ.ಇದನ್ನು ಸರಿಪಡಿಸಿಕೊಡುವ ಕೆಲಸ ಮಾಡುತ್ತೇನೆ.ಯುಜಿಡಿ, ಮಳೆ ನೀರು ಹರಿಯುವ ತೋಡು ಮತ್ತಿತರ ಕೆಲಸಗಳನ್ನು ಮಾಡಲು ಆದ್ಯತೆ ನೀಡಲಾಗುವುದು ಎಂದರು. ಸುರತ್ಕಲ್ ಮಾರುಕಟ್ಟೆಯ ಕಾಮಗಾರಿಯನ್ನು ಶೀಘ್ರ ಮುಗಿಸುವ ಸಲುವಾಗಿ ಯಾವುದೇ ಅಡೆ ತಡೆಗಳಿದ್ದರೂ ಬಗೆ ಹರಿಸಲಾಗುವುದು. ಕೃಷಿ ಕೇಂದ್ರ ಬುಧವಾರ ಸ್ಥಳಾಂತರಗೊಳ್ಳಲಿದೆ ಎಂದರು.
ಈಶ್ವರನಗರದಲ್ಲಿ 10 ಲಕ್ಷ ರೂ.ಸದಾಶಿವನಗರದಲ್ಲಿ 20 ಲಕ್ಷ ಮತ್ತು 5 ಲಕ್ಷ ರೂ,ಕಬ್ಬಿನಹಿತ್ಲುವಿನಲ್ಲಿ 5ಲಕ್ಷ ರೂ, ವೆಚ್ಚದಲ್ಲಿ ನಾಲ್ಕು ಕಾಂಕ್ರಟೀಕರಣ ರಸ್ತೆಗಳ ಉದ್ಘಾಟನೆ ನೆರವೇರಿತು. ಸ್ಥಳೀಯ ಕಾರ್ಪೋರೇಟರ್ ನಯನ ಆರ್. ಕೋಟ್ಯಾನ್, ಉತ್ತರ ಮಂಡಲದ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಗಂಗಾಧರ ಸನಿಲ್, ಕಾರ್ಯದರ್ಶಿ ರಾಘವೇಂದ್ರ ಶೆಣೈ,ಬಿಜೆಪಿ ಮುಖಂಡರಾದ ಜಯಂತ್ ಸಾಲ್ಯಾನ್,ಸಂದೇಶ್ ಇಡ್ಯಾ,ದಿನಕರ್ ಇಡ್ಯಾ,ದಿವೇಶ್ ಪೂಜಾರಿ,ಸುರೇಶ್ ಸಾಲ್ಯಾನ್,ವೇಣುಗೋಪಾಲ ಪೈ,ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/01/2021 09:40 pm