ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಚಿತ್ರಾಪು ಗ್ರಾಮದ ಕೊಲ್ನಾಡು ಗುಂಡಾಲು ಬಳಿ ಕೆಲ ದುಷ್ಕರ್ಮಿಗಳು ಪಿಕಪ್ ವಾಹನದಲ್ಲಿ ತ್ಯಾಜ್ಯ ತಂದು ಖಾಲಿ ಜಾಗದಲ್ಲಿ ಎಸೆದು ಹೋಗಿದ್ದಾರೆ ಎಂದು ಮುಲ್ಕಿ ನಪಂ ಸದಸ್ಯ ಹರ್ಷ ರಾಜ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲ್ಕಿಯ ಲಿಂಗಪ್ಪಯ್ಯ ಕಾಡು ವಿನ ಪಿಕಪ್ ವಾಹನ( ಕೆಎ 19 ಬಿ 99 17) ದಲ್ಲಿ ಬಂದ ದುಷ್ಕರ್ಮಿಗಳು ಲೋಡುಗಟ್ಟಲೆ ತ್ಯಾಜ್ಯವನ್ನು ಗುಂಡಾಲುಗುತ್ತು ಬಳಿ ಹೋಗುವ ಖಾಲಿ ಜಾಗದಲ್ಲಿ ಹಾಕಿ ಹೋಗಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿಂದ ಕೆಲವು ಮಂದಿ ತ್ಯಾಜ್ಯ ಎಸೆದು ಹೋಗುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿರುವ ಕೆಲವು ಮೀನಿನ ವಾಹನಗಳ ಚಾಲಕರು ಮೀನಿನ ನೀರನ್ನು ಹೆದ್ದಾರಿ ಬದಿಗೆ ಬಿಡುತ್ತಿದ್ದು, ದುರ್ವಾಸನೆ ಬೀರುತ್ತಿದೆ.
ಕೂಡಲೇ ಟ್ರಾಫಿಕ್ ಪೊಲೀಸರು ಹಾಗೂ ಮುಲ್ಕಿ ನಪಂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
Kshetra Samachara
04/01/2021 07:47 am