ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಶ್ರೀ ಸುಬ್ರಹ್ಮಣ್ಯ ಸಭಾ ಭವನ ಭೋಜನ ಶಾಲೆಗೆ 40 ಫ್ಯಾನ್, 2 ಏರ್ ಕೂಲರ್ ಕೊಡುಗೆ

ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡಿರುವ ಶ್ರೀ ಸುಬ್ರಹ್ಮಣ್ಯ ಸಭಾಭವನದ ಭೋಜನ ಶಾಲೆಗೆ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ತೋಕೂರು ಮತ್ತು ಮಹಿಳಾ ಮಂಡಲವು ಸುಮಾರು 80,000 ರೂ. ವೆಚ್ಚದಲ್ಲಿ 40 ಫ್ಯಾನ್ , 2 ಏರ್ ಕೂಲರ್ ಮತ್ತು ಪೋಡಿಯಂ ಕೊಡುಗೆ ನೀಡಿದ್ದಾರೆ.

ಯುವಕ ಸಂಘದ ಅಧ್ಯಕ್ಷ ವಿನೋದ್ ಕುಮಾರ್, ಮಹಿಳಾ ಮಂಡಲ ಅಧ್ಯಕ್ಷೆ ಅನುಪಮ ಎ. ರಾವ್ ಅವರು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್ ಮತ್ತು ಇತರ ಸದಸ್ಯರ ಸಮಕ್ಷಮದಲ್ಲಿಈ ಎಲ್ಲ ಪರಿಕರಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.

ಜಂಟಿ ಸಂಸ್ಥೆಗಳ ಸದಸ್ಯರು, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

01/01/2021 07:41 pm

Cinque Terre

3.96 K

Cinque Terre

0

ಸಂಬಂಧಿತ ಸುದ್ದಿ