ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಬಂಟ್ವಾಳ : ರೈತ ಸಂಘಟನೆಗಳು ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ಭಾರತ ಬಂದ್ ಗೆ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ಬದಲಾಗಿ ಎಂದಿನಂತೆಯೇ ಬಸ್ಸು, ಕಾರುಗಳು, ದ್ವಿಚಕ್ರ ವಾಹನಗಳು ಓಡಾಟ ನಡೆಸಿದರೆ, ಜನಜೀವನ ಸಹಜ ಸ್ಥಿತಿಯಲ್ಲಿತ್ತು.

ಅಂಗಡಿಗಳು ತೆರೆದಿದ್ದರೆ, ಕಚೇರಿ, ಬ್ಯಾಂಕ್, ಸರ್ಕಾರಿ ಕಚೇರಿಗಳು, ಕೋರ್ಟು, ವಕೀಲರ ಕಚೇರಿ, ದಿನಸಿ ಅಂಗಡಿಗಳು ಎಂದಿನಂತೆಯೇ ಚಟುವಟಿಕೆ ನಡೆಸಿದವು.

ಕೆ.ಎಸ್.ಆರ್.ಟಿ.ಸಿ. ಬಸ್ ಗಳು, ಖಾಸಗಿ ಬಸ್ ಗಳು ಎಂದಿನಂತೆಯೇ ಸಂಚಾರ ನಡೆಸಿದವು. ರೈತಪರ ಸಂಘಟನೆಗಳಿಗೆ ಬಿಜೆಪಿಯೇತರ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು, ಮಂಗಳೂರಿನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ಕಾರಣ ಬಿ.ಸಿ.ರೋಡಿನಲ್ಲಿ ಸಾಂಕೇತಿಕ ಪ್ರತಿಭಟನೆಯೂ ಇರಲಿಲ್ಲ.

Edited By : Nirmala Aralikatti
Kshetra Samachara

Kshetra Samachara

08/12/2020 06:49 pm

Cinque Terre

3.23 K

Cinque Terre

0

ಸಂಬಂಧಿತ ಸುದ್ದಿ