ಮಂಗಳೂರು: ನಗರದ ಕದ್ರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಂಪೌಂಡ್ ಗೋಡೆಯೊಂದರಲ್ಲಿ ಲಷ್ಕರ್ ಉಗ್ರರ ಪರ ಬರಹ ಕಂಡುಬಂದಿದ್ದು ಇದು ಜಿಲ್ಲೆಯ ಶಾಂತಿಯನ್ನು ಕದಡಲು ಕಿಡಿಗೇಡಿಗಳು ನಡೆಸುತ್ತಿರುವಂತಹ ದುಷ್ಕೃತ್ಯ ಯತ್ನದ ಭಾಗವಾಗಿದೆ.
ತಕ್ಷಣವೇ ಇಂತಹ ದುಷ್ಕರ್ಮಿಗಳನ್ನ ಬಂಧಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಘಟನೆ ಖಂಡಿಸಿ ಹೇಳಿಕೆ ನೀಡಿರುವ ಜಿಲ್ಲಾ SDPI ನಾಯಕರು, ಜಿಲ್ಲೆಯಲ್ಲಿ ಹಲವಾರು ಸಮಯಗಳಿಂದ ಫ್ಯಾಶಿಸ್ಟ್ ಶಕ್ತಿಗಳು ಜಿಲ್ಲೆಯ ಶಾಂತಿಯನ್ನು ಕದಡಲು ಪ್ರಯತ್ನ ಪಡುತ್ತಿದ್ದಾರೆ,ಇದರ ಮುಂದುವರಿದ ಭಾಗವಾಗಿ ಗೋಡೆಯಲ್ಲಿ ಉಗ್ರರ ಪರ ಬರಹ ಬರೆದು ಗಲಭೆ ಸೃಷ್ಟಿಸಲು ಪ್ರಯತ್ನ ಪಡುತ್ತಿರುವುದು ಕಂಡುಬರುತ್ತಿದೆ.
ಮಂಗಳೂರಿನ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲೂ ಸಿಸಿ ಟಿವಿ ಕೆಮರಾಗಳಿವೆ. ಅಲ್ಲದೇ ಪೋಲಿಸ್ ಇಲಾಖೆ ರಾತ್ರಿ ವೇಳೆಯಲ್ಲಿ ಗಸ್ತು ತಿರುಗುತ್ತಿದ್ದರೂ ಕೂಡ ಇವರ ಕಣ್ಣು ತಪ್ಪಿಸಿ ಕಿಡಿಗೇಡಿಗಳು ಇಂತಹ ಪ್ರಯತ್ನ ಪಡುತ್ತಿರುವುದನ್ನು ಕಾಣುವಾಗ ಮಂಗಳೂರು ನಗರ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬ ಪ್ರಶ್ನೆಯು ಮೂಡುತ್ತದೆ.
ಈ ಒಂದು ಘಟನೆಯು ಪರಸ್ಪರ ದ್ವೇಷ ಹರಡಿಸುವಂತಹ ಪ್ರಯತ್ನ ಕೂಡ ಆಗಿರುತ್ತದೆ.
ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ದೇಶದ್ರೋಹದ ಹೇಳಿಕೆ, ಕೆಲವು ವರ್ಷಗಳ ಹಿಂದೆ ಸಂಘಪರಿವಾರ ಸಿಂಧಗಿಯಲ್ಲಿ ಪಾಕಿಸ್ತಾನದ ದ್ವಜ ಹಾರಿಸಿರುವುದು ಅದೇ ರೀತಿ ಶೃಂಗೇರಿಯಲ್ಲಿ ಶಂಕರಾಚರ್ಯರ ಪ್ರತಿಮೆಯ ಮೇಲೆ ಬಾವುಟ ಹಾರಿಸಿದ ಪ್ರಕರಣವನ್ನೆಲ್ಲ ಗಮನಿಸುವಾಗ ಉಗ್ರರ ಪರ ಗೋಡೆ ಬರಹ ಬರೆದು ಸಂಘಪರಿವಾರ ಪರಸ್ಪರ ಕೋಮು ಧ್ರುವೀಕರಣ ಮಾಡಲು ನಡೆಸುತ್ತಿರುವ ಯತ್ನದಂತೆ ಸಂಶಯ ಮೂಡುತ್ತಿದೆ.
ಹಾಗಾಗಿ ಆರೋಪಿಗಳು ಯಾರೇ ಆಗಿದ್ದರು ಪೋಲಿಸ್ ಇಲಾಖೆ ಯಾವುದೇ ಒತ್ತಡಗಳಿಗೆ ಮಣಿಯದೆ ಅತೀ ಶೀಘ್ರದಲ್ಲಿ ನೈಜ ಆರೋಪಿಗಳನ್ನು ಬಂಧಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಬೇಕು ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ಎಚ್ ಆಗ್ರಹಿಸಿದ್ದಾರೆ.
Kshetra Samachara
28/11/2020 02:19 pm